ತಿಪಟೂರು: ನಗರದ ವಾರ್ಡ್ ನಂಬರ್ 3 ರ ಚಿಕ್ಕಮಾರುಕಟ್ಟೆಯ ಪ್ರಧಾನ ಅಂಚೆ ಕಚೇರಿಯ ಪಕ್ಕದ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸುಮಾರು ಒಂದು ವರ್ಷಗಳಿಂದ ಮುಚ್ಚಿದ್ದು, ನಗರಸಭೆ ಕೂಡಲೇ ಮುಚ್ಚಿರುವ ಶೌಚಾಲಯವನ್ನು ತೆರೆದು, ಸಾರ್ವಜನಿಕರ ಅನುಕೂಲಕ್ಕೆ ಕಲ್ಪಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಶೌಚಾಲಯದ ಮುಂದೆ ಪ್ರತಿಭಟನೆ ನಡೆಸಿ, ಸ್ಥಳೀಯ ನಗರಸಭೆ ಸದಸ್ಯರ ಮತ್ತು ನಗರಸಭೆ ಅಧಿಕಾರಿಗಳ ಮೇಲೆ ದಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ಹಳೆ ತರಕಾರಿ ಮಾರುಕಟ್ಟೆ, ಅಂಚೆ ಕಚೇರಿ, ಆಸ್ಪತ್ರೆ, ಮಟನ್ ಮಾರ್ಕೆಟ್, ಉರ್ದು ಶಾಲೆ ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ಗ್ರಂಥಾಲಯವಿದ್ದು, ಇಲ್ಲಿಗೆ ಪ್ರತಿನಿತ್ಯ ತಮ್ಮ ವ್ಯಾಪಾರ ವಹಿವಾಟಿಗೆ ನೂರಾರು ಸಂಖ್ಯೆಯ ಸಾರ್ವಜನಿಕರು, ರೈತರು ಮತ್ತು ಮಹಿಳೆಯರು ಬಂದು ಹೋಗುತ್ತಾರೆ. ನಗರಸಭೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ, ಶೌಚಾಲಯ ನಿರ್ಮಿಸಿದ್ದು, ಕೆಲವೇ ತಿಂಗಳುಗಳಲ್ಲಿ ಮುಚ್ಚಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಗುತ್ತಿಗೆದಾರರ ಪಾಲಾಗಿದ್ದು, ಸುತ್ತಮುತ್ತ ಗಿಡ ಗಂಟೆಗಳು ಬೆಳೆದಿದ್ದು, ಇಲಿ-ಹೆಗ್ಗಣಗಳ ವಾಸ ಸ್ಥಳವಾಗಿದೆ.
ವ್ಯಾಪಾರಕ್ಕೆ ಬರುವ ಸಾರ್ವಜನಿಕರು ಅನ್ಯ ಮಾರ್ಗ ಬಳಸುತ್ತಿದ್ದಾರೆ. ಸುತ್ತಮುತ್ತ ಗಬ್ಬುವಾಸನೆ ಬರುತ್ತಿದೆ. ಸುತ್ತಮುತ್ತಲಿರುವ ಚರಂಡಿಗಳು ತುಂಬಿ ತುಳುಕುತ್ತಿದ್ದು, ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗ ಭೀತಿ ಬರಬಹುದೆಂದು ತರಕಾರಿ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಅನಿಸಿಕೆಯಾಗಿದೆ. ಈ ರಸ್ತೆಯಲ್ಲಿ ಓಡಾಡಲು ತೊಂದರೆಯಾಗಿದ್ದು,ಈ ವಿಚಾರವಾಗಿ ಸ್ಥಳೀಯ ನಗರಸಭಾ ಸದಸ್ಯರಿಗೆ ತಿಳಿಸಿದರೆ, ಕ್ಯಾರೆ ಎನ್ನದೆ ತಮಗಿಷ್ಟ ಬಂದAತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರ ಆಕ್ರೋಶವಾಗಿದೆ.
ಸಾರ್ವಜನಿಕರ ಶೌಚಾಲಯ ತೀರಾ ಹದಗೆಟ್ಟು, ಸೂಕ್ತ ವ್ಯವಸ್ಥೆ ಇಲ್ಲದೆ ಮುಚ್ಚಿ ಹೋಗಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ನಗರಕ್ಕೆ ದಿನನಿತ್ಯ ಜನಸಂದಣಿ ಹೆಚ್ಚುತ್ತಿದ್ದು, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಗರಕ್ಕೆ ಕಪುö್ಪ ಚುಕ್ಕಿ ಇಟ್ಟಂತಾಗುತ್ತದೆ ಮತ್ತು ಶೋಚನೀಯ ಸಂಗತಿ. ಸಂಬAಧಪಟ್ಟ ನಗರಸಭೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಮುಚ್ಚಿರುವ ಶೌಚಾಲಯ ಬಾಗಿಲನ್ನು ತೆರೆದು, ಸೂಕ್ತ ವ್ಯವಸ್ಥೆಯೊಂದಿಗೆ ಪುನರಾರಂಭಿಸಬೇಕು ಎಂದು ವಕೀಲ ಕೆ.ಎಸ್.ಸದಾಶಿವಯ್ಯ ತಿಳಿಸಿದರು.