‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ಚಿತ್ರದ ನಿರ್ಮಾಪಕ.

‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ಚಿತ್ರದ ನಿರ್ಮಾಪಕ.

ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ನಿರ್ಮಾಪಕ ಎನ್.ಎಸ್. ರಾಜಕುಮಾರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಯಶಸ್ವಿಯಾಗಿರುವ ಈ ಚಿತ್ರ ತಮಿಳು ಪ್ರೇಕ್ಷಕರನ್ನೂ ರಂಜಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡದ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಲಿದೆ.

‘ಸು ಫ್ರಮ್ ಸೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂನಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಚಿತ್ರ ತಮಿಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈಗ ಆ ಮಾತುಕತೆ ಫೈನಲ್ ಆಗಿದೆ. ದೊಡ್ಡ ಮೊತ್ತಕ್ಕೆ ಎನ್ಎಸ್ ರಾಜ್ಕುಮಾರ್ ಅವರು ‘ಸು ಫ್ರಮ್ ಸೋ’ ಚಿತ್ರದ ತಮಿಳು ರಿಮೇಕ್ ಹಕ್ಕನ್ನು ಪಡೆದಿದ್ದಾರೆ.

‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಯಿತು. ಆ ಬಳಿಕ ಚಿತ್ರ ಮಲಯಾಳಂನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ತೆಲುಗು ಮಂದಿ ಕೂಡ ಚಿತ್ರವನ್ನು ಇಷ್ಟಪಟ್ಟರು. ಈ ಸಿನಿಮಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಶನೀಲ್ ಗೌತಮ್, ಸಂಧ್ರ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಟಿಸಿದ್ದಾರೆ.

ಸದ್ಯ ಎನ್ಎಸ್ ರಾಜ್ಕುಮಾರ್ ಅವರು ‘ಸು ಫ್ರಮ್ ಸೋ’ ತಮಿಳು ಹಕ್ಕನ್ನು ಪಡೆದಿದ್ದಾರೆ. ಅವರು ಕನ್ನಡದಲ್ಲಿ ‘ಮೈನಾ’, ‘ಮೈತ್ರಿ’, ‘ಪೃಥ್ವಿ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ‘ಸು ಫ್ರಮ್ ಸೋ’ ಹಕ್ಕನ್ನು ಖರೀದಿ ಮಾಡಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾನ ತಮಿಳಿಗೆ ಡಬ್ ಮಾಡುವ ಬದಲು ಆ ಭಾಷೆಗೆ ರಿಮೇಕ್ ಮಾಡಿದರೆ ಹೆಚ್ಚು ಸೂಕ್ತ ಎಂದು ತಂಡದವರು ನಿರ್ಧರಿಸಿತ್ತು. ಈಗ ಸೂಕ್ತ ಎನಿಸಿದವರಿಗೆ ಹಕ್ಕನ್ನು ಮಾರಲಾಗಿದೆ. ಸಿನಿಮಾದ ಪಾತ್ರವರ್ಗ, ತಾಂತ್ರಿಕ ತಂಡದ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.  ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಒಂದು ಸ್ಟ್ರಾಂಗ್ ಮೆಸೇಜ್ ಇದೆ. ಇದು ತಮಿಳು ನಾಡು ಜನತೆಗೂ ಇಷ್ಟ ಆಗಲಿದೆ ಎಂಬ ನಂಬಿಕೆ ರಾಜ್ಕುಮಾರ್ ಅವರದ್ದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *