1ವರ್ಷದ ಬಳಿಕ ಅಲ್ಲು ಅರ್ಜುನ್ ಬ್ಲಾಕ್‌ಬಸ್ಟರ್ ಮತ್ತೆ ಜಪಾನ್ ಪರದೆ ಮೇಲೆ
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ 4ರಂದು ರಿಲೀಸ್ ಆಯಿತು. ಅಂದರೆ ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಈ ಚಿತ್ರ ತೆರೆಗೆ ಬಂದು ದಾಖಲೆಗಳ ಮೇಲೆ ದಾಖಲೆ ಬರೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದ್ದು ಗೊತ್ತೇ ಇದೆ. ಈಗ ಈ ಸಿನಿಮಾ ಮತ್ತೆ ತೆರೆ ಕಾಣಲು ರೆಡಿ ಆಗಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಾದರೆ, ಈ ಚಿತ್ರ ಮತ್ತೆ ತೆರೆ ಕಾಣಲು ಕಾರಣ ಏನು? ಅಂದಹಾಗೆ ಈ ಚಿತ್ರವು ಭಾರತದಲ್ಲಿ ಬಿಡುಗಡೆ ಕಾಣುತ್ತಿಲ್ಲ. ಈ ಚಿತ್ರ ತೆರೆಗೆ ಬರುತ್ತಿರುವುದು ಜಪಾನ್ ಅಲ್ಲಿ.
ಜಪಾನ್ ಅಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ. ಈಗಾಗಲೇ ‘ಬಾಹುಬಲಿ’, ‘ಬಾಹುಬಲಿ 2’, ‘ಕೆಜಿಎಫ್ 2’ ‘ಆರ್ಆರ್ಆರ್’ ಅಂತಹ ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ಯಶಸ್ಸು ಕಂಡವು. ‘ಪುಷ್ಪ’ ಸಿನಿಮಾ ಕೂಡ ಈ ಮೊದಲು ಜಪಾನ್ ಅಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಈಗ ‘ಪುಷ್ಪ 2’ ಚಿತ್ರದ ಸರದಿ.
ಮುಂದಿನ ವರ್ಷ ಜನವರಿ 16ರಂದು ‘ಪುಷ್ಪ 2’ ಚಿತ್ರ ಜಪಾನ್‌ನಲ್ಲಿ ತೆರೆಗೆ ಬರಲಿದೆಯಂತೆ. ‘ಪುಷ್ಪ’ ಚಿತ್ರದಲ್ಲಿ ಕಥೆಗೆ ಜಪಾನ್ ಲಿಂಕ್ ಇತ್ತು. ಎರಡನೇ ಪಾರ್ಟ್ ಆರಂಭ ಆಗೋದು ಕೂಡ ಜಪಾನ್ ಕಥೆಯೊಂದಿಗೆ. ಕಥಾ ನಾಯಕ ಜಪಾನ್ಗೆ ತೆರಳುತ್ತಾನೆ ಮತ್ತು ಅಲ್ಲಿ ಫೈಟ್ ನಡೆಯುತ್ತದೆ. ಹೀಗಾಗಿ ಜಪಾನ್ ಜನರಿಗೆ ಸಿನಿಮಾ ಮತ್ತಷ್ಟು ಇಷ್ಟ ಆಗಬಹುದು ಎಂಬ ಆಲೋಚನೆಯಲ್ಲಿ ತಂಡ ಇದೆ.
For More Updates Join our WhatsApp Group :
