KSRTC ಬಸ್ ಗೆ ಡಿಕ್ಕಿ ಹೊಡೆದ ಕ್ವಾಲಿಸ್ ಕಾರು: 6 ಮಂದಿ ಮೃತ್ಯು..!!

ರಾಮನಗರ: ಕನಕಪುರ ತಾಲೂಕಿನ ಸಾತನೂರು ಬಳಿ ಸೋಮವಾರ ಸಂಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಮತ್ತು ಟೊಯೊಟಾ ಕ್ವಾಲಿಸ್ ಕಾರು ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ಕ್ವಾಲಿಸ್‌ನಲ್ಲಿದ್ದವರಾಗಿದ್ದು, ಬಸ್ ಚಾಲಕನ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾರು

ಆಗಸ್ಟ್ 28 ರಂದು ಸಂಜೆ 4:45 ರ ಸುಮಾರಿಗೆ ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದರು ಮತ್ತು 10 ಕ್ಕೂ ಹೆಚ್ಚು ಜನರು ಅಪಘಾತದಲ್ಲಿ ಗಾಯಗೊಂಡರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ವರದಿಗಳ ಪ್ರಕಾರ ಮೃತರ ಪೈಕಿ ಒಬ್ಬರು ವಿಧಾನಸೌಧದ ವಿಧಾನಸಭೆಯ ಉದ್ಯೋಗಿಯಾಗಿದ್ದಾರೆ.

ಬಸ್ ಕನಕಪುರದಿಂದ ಹಲಗೂರಿಗೆ ತೆರಳುತ್ತಿದ್ದು, ಕ್ವಾಲಿಸ್ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿತ್ತು. ಮೃತರಲ್ಲಿ ಕುಮಾರ, ನಾಗೇಶ್, ಗೋವಿಂದ ಶಾಸಕರ ಭವನದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪುಟ್ಟರಾಜು, ಜ್ಯೋತಿಲಿಂಗಪ್ಪ ಮತ್ತು ಶಾಂತಕುಮಾರ್ ಎಂಬುವವರೇ ಬಲಿಯಾಗಿದ್ದಾರೆ.

ಅಪಘಾತದಲ್ಲಿ ಬಸ್ಸಿನಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಸ್ ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *