ಪರಪ್ಪನ ಅಗ್ರಹಾರದ ವಿವಾದ ಮತ್ತೊಮ್ಮೆ ತೀವ್ರಗೊಳಿಸಿದ R. ಅಶೋಕ್

ಪರಪ್ಪನ ಅಗ್ರಹಾರದ ವಿವಾದ ಮತ್ತೊಮ್ಮೆ ತೀವ್ರಗೊಳಿಸಿದ R. ಅಶೋಕ್

ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನ ಹೊಣೆ ಮಾಡಿರೋ ಬಿಜೆಪಿ ನಿಗಿನಿಗಿ ಅಂತಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮುಸಲ್ಮಾನರನ್ನು ಮುಟ್ಟಿದರೆ ನಮಗೆ ಪ್ರಮೋಷನ್ ಇಲ್ಲ ಅಂತಾ ಕರ್ನಾಟಕದ ಪೊಲೀಸರು ಭಯಗೊಂಡಿದ್ದಾರೆ. ಯಾವ ಸ್ಟೇಷನ್ ಗಳಲ್ಲೂ ಈಗ ಮುಸಲ್ಮಾನರ ಮೇಲೆ ಏನೂ ಕೇಸ್ ಮಾಡಲ್ಲ. ಈಗ ಅದು ಪರಪ್ಪನ ಅಗ್ರಹಾರದವರೆಗೆ ಹೋಗಿದೆ. ಪರಪ್ಪನ ಅಗ್ರಹಾರದಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರು ನಮಗೆ ಕರ್ನಾಟಕ ಕೊಡಿ ಎಂದು ಅರ್ಜಿ ಹಾಕುತ್ತಿದ್ದಾರಂತೆ. ದರ್ಶನ್ ಬೀಡಿ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬೇಲ್ ಕ್ಯಾನ್ಸಲ್ ಮಾಡಿಸಿದರು. ಇದರಲ್ಲಿ ಸುಪ್ರೀಂ ಕೋರ್ಟ್ ಗೆ ಸರ್ಕಾರ ಹೋಗಲ್ಲ. ದರ್ಶನ್ ಗೆ ಒಂದು ಕಾನೂನು, ಭಯೋತ್ಪಾದಕರಿಗೆ ರಾಜಾತಿಥ್ಯ. ಯಾಕೆಂದರೆ ದರ್ಶನ್ ಹಿಂದೂ, ಇವರು ಮುಸಲ್ಮಾನರು. ದರ್ಶನ್ ತಪ್ಪು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ ತಾನೇ. ದೇಶದ್ರೋಹಿಗೆ ಒಂದು ಕಾನೂನು, ದರ್ಶನ್ ಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *