‘ಸು ಫ್ರಮ್ ಸೋ’ ಓವರ್ ಹೈಪ್ ಎಂದವರಿಗೆ ರಾಜ್ ಬಿ. ಶೆಟ್ಟಿ ಕೊಟ್ಟರು ಖಡಕ್ ಉತ್ತರ.

‘ಸು ಫ್ರಮ್ ಸೋ’ ಓವರ್ ಹೈಪ್ ಎಂದವರಿಗೆ ರಾಜ್ ಬಿ. ಶೆಟ್ಟಿ ಕೊಟ್ಟರು ಖಡಕ್ ಉತ್ತರ

ರಾಜ್ ಬಿ. ಶೆಟ್ಟಿ ಅವರ ‘ಸು ಫ್ರಮ್ ಸೋ’ ಸಿನಿಮಾ ಅಪಾರ ಯಶಸ್ಸು ಕಂಡಿದೆ. ಈ ಸಿನಿಮಾ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಕೆಲವರು ಈ ಚಿತ್ರವನ್ನು ಓವರ್ ಹೈಪ್ ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್, ಸ್ಪಷ್ಟ ಉತ್ತರ ನೀಡಿದ್ದಾರೆ

‘ಸು ಫ್ರಮ್ ಸೋ’ ಸಿನಿಮಾ  ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲೇ 50 ಕೋಟಿ ರೂಪಾಯಿ ಬಾಚಿಕೊಳ್ಳುವ ಸೂಚನೆ ಇದೆ. ಸಿನಿಮಾದ ಕಲೆಕ್ಷನ್ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾಗೆ ಈಗಾಗಲೇ 40 ಸಾವಿರ ಮಂದಿ ವೋಟ್ ಮಾಡಿದ್ದು, 9.5 ರೇಟಿಂಗ್ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಒಂದು ಇಷ್ಟು ಒಳ್ಳೆಯ ಮೆಚ್ಚುಗೆ ಪಡೆದಿದ್ದು ಇದೇ ಮೊದಲು. ಈ ಮಧ್ಯೆ ಕೆಲವರು ‘ಸು ಫ್ರಮ್ ಸೋ’ ಚಿತ್ರವನ್ನು ಓವರ್ ಹೈಪ್ಡ್ ಸಿನಿಮಾ ಎಂದು ಕರೆದಿದ್ದಾರೆ. ಇದಕ್ಕೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *