ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರ ನಡುವೆ ಆಳವಾದ ಗೆಳೆತನ ಇದೆ. ರಾಜ್ ಬಿ ಶೆಟ್ಟಿ ಅವರ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಆರಂಭವಾದ ಈ ಬಾಂಧವ್ಯ, ಈಗಲೂ ಮುಂದುವರಿದಿದೆ. ಇವರ ಯಶಸ್ಸು ಮತ್ತು ಸ್ನೇಹದ ಬಗ್ಗೆ ರಾಜ್ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ಒಳ್ಳೆಯ ಫ್ರೆಂಡ್ಸ್. ಇವರ ಬಾಂಧವ್ಯ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ರಾಜ್ ಬಿ ಶೆಟ್ಟಿ ಅವರು ಈಗ ರಿಷಬ್ ಹಾಗೂ ರಕ್ಷಿತ್ ಗೆಳೆತನವನ್ನು ನೆನಪಿಸಿಕೊಂಡಿದ್ದಾರೆ. ಇವರ ಮಧ್ಯೆ ಬಾಂಡಿಂಗ್ ಬೆಳೆಯಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ‘ದಿ ಹಾಲಿವುಡ್ ರಿಪೋರ್ಟರ್ಗೆ’ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ರಾಜ್ ಬಿ. ಶೆಟ್ಟಿ ‘ಒಂದು ಮೊಟ್ಟೆಯ ಕಥೆ’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರ ಮೆಚ್ಚುಗೆ ಪಡೆಯಿತು. ಸಿನಿಮಾದ ಗಂಧ ಗಾಳಿ ಗೊತ್ತಿಲ್ಲದೆ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಅವರು ಯಶಸ್ಸು ಕಂಡರು. ಈ ವೇಳೆ ರಕ್ಷಿತ್ ಹಾಗೂ ರಾಜ್. ಬಿ ಶೆಟ್ಟಿ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರಂತೆ. ಹೀಗೆ ಇವರ ಗೆಳೆತನ ಆರಂಭ ಆಯಿತು.
‘ಸಿನಿಮಾದಿಂದ ಗೆಳೆತನ ಶುರುವಾಯಿತು. ನಾನು ಒಂದು ಮೊಟ್ಟೆಯ ಕಥೆ ಸಿನಿಮಾ ಮಾಡಿದಾಗ ಅವರು ಚಿತ್ರವನ್ನು ನೋಡಿ ನನಗೆ ಕರೆ ಮಾಡಿದರು. ಹೀಗೆ ಗೆಳೆತನ ಆರಂಭ ಆಗಿದ್ದು. ನಾನು ಮಂಗಳೂರಿನವನು. ಸಿನಿಮಾ ರಂಗಕ್ಕೆ ನಾನು ಎಕ್ಸ್ಪೋಸ್ ಆಗಿರಲಿಲ್ಲ. ರಿಷಬ್ ಹಾಗೂ ರಕ್ಷಿತ್ ಹಲವು ವರ್ಷಗಳಿಂದ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದರು. ನಿಮ್ಮಲ್ಲಿ ಯಾರಿಗಾದರೂ ನಾನು ಬರೆಯಬಹುದೇ ಎಂದು ಕೇಳಿದೆ. ಆಗ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರೆದೆ. ಚಾರ್ಲಿಗೆ ಬರೆದೆ. ಕಾಂತಾರದ ಒಂದು ಭಾಗ ಬರೆದೆ’ ಎಂದರು ರಾಜ್.
‘ನಾನು ಗರುಡ ಗಮನ ವೃಷಭ ವಾಹನ ಮಾಡಿದೆ. ನಾನು ರಕ್ಷಿತ್ಗೆ ತೋರಿಸಿದೆ. ಅವನೇ ಕರೆ ಮಾಡಿ ನಾನು ಪ್ರೆಸೆಂಟ್ ಮಾಡ್ತೀನಿ ಎಂದ. ನಮ್ಮ ಗೆಳೆತನ ಆಳವಾಗಿದೆ. ಎಲ್ಲರೂ ಪ್ರಾಮಾಣಿಕವಾಗಿದ್ದಾರೆ. ಇಲ್ಲಿ ಸ್ಪರ್ಧೆ ಇಲ್ಲ. ರಕ್ಷಿತ್ ಈಗಲೂ ಮೆಸೇಜ್ ಮಾಡುತ್ತಾನೆ. ನಮ್ಮ ಮಧ್ಯೆ ಇರುವ ಫ್ರೆಂಡ್ಶಿಪ್ನಲ್ಲಿ ಕುತಂತ್ರ ಇಲ್ಲ’ ಎಂದಿದ್ದಾರೆ ಅವರು.
For More Updates Join our WhatsApp Group :