ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮತ್ತು ರಾಜ್ ಬಿ. ಶೆಟ್ಟಿ ಅವರ ಸಹಯೋಗದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಶೈಲಿಯ ಸಿನಿಮಾಗಳು ಬಂದಿವೆ. ‘ಕಾಂತಾರ’,‘ಕಿರಿಕ್ ಪಾರ್ಟಿ’ ಮುಂತಾದ ಯಶಸ್ವಿ ಚಿತ್ರಗಳನ್ನು ಈ ತಂಡ ನೀಡಿದೆ. “ಶೆಟ್ಟಿ ಗ್ಯಾಂಗ್” ಎಂಬ ಹೆಸರಿನಿಂದ ಕರೆಯಲ್ಪಡುವ ಈ ಗುಂಪಿನ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ರಿಷಬ್ ಶೆಟ್ಟ, ರಾಜ್ ಬಿ. ಶೆಟ್ಟಿ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಂದಮೇಲೆ ಚಿತ್ರರಂಗಕ್ಕೆ ಹೊಸ ಹೊಸ ರೀತಿಯ ಸಿನಿಮಾಗಳು ಸಿಕ್ಕಿವೆ. ‘ಒಂದು ಮೊಟ್ಟೆಯ ಕಥೆ’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಸು ಫ್ರಮ್ ಸೋ’ ಹೀಗೆ ಪಟ್ಟಿ ಬೆಳೆಯುತ್ತೇ ಹೋಗುತ್ತದೆ. ಅನೇಕರು ಈ ಗ್ಯಾಂಗ್ನ ಮಾಫಿಯಾ ಎಂದು ಕರೆದಿದ್ದಾರಂತೆ. ಈ ಬಗ್ಗೆ ರಾಜ್ ಬಿ. ಶೆಟ್ಟಿಗೆ ಅಸಮಾಧಾನ ಇದೆ. ಅನುಪಮಾ ಚೋಪ್ರಾ ಅವರ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ರಿಷಬ್, ರಕ್ಷಿತ್, ರಾಜ್ ಹಾಗೂ ಇತರರು ಒಳ್ಳೆಯ ಸಿನಿಮಾ ನೀಡುವ ಪ್ರಯತ್ನದಲ್ಲಿ ಇದ್ದಾರೆ. ಕೆಲವೊಮ್ಮೆ ಇವರು ಸೋತಿದ್ದಾರೆ, ಇನ್ನೂ ಕೆಲವೊಮ್ಮೆ ದೊಡ್ಡ ಗೆಲುವು ಕಂಡಿದ್ದಾರೆ. ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಬೆಲ್ ಬಾಟಂ’, ‘ಸು ಫ್ರಮ್ ಸೋ’, ‘ಟೋಬಿ’ ಸಿನಿಮಾಗಳು ಯಶಸ್ಸು ಕಂಡಿವೆ. ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದಿವೆ. ‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ರಾಜ್ ಬಿ ಶೆಟ್ಟಿ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆಗ ಅವರು ಶೆಟ್ಟಿ ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ.
For More Updates Join our WhatsApp Group :