ರಜನಿ-ಕಮಲ್ ಸಿನಿಮಾ ಕಂಫರ್ಮ್ – ಆದರೆ ಒಂದು ದೊಡ್ಡ ಟ್ವಿಸ್ಟ್!

ರಜನಿ-ಕಮಲ್ ಸಿನಿಮಾ ಕಂಫರ್ಮ್ – ಆದರೆ ಒಂದು ದೊಡ್ಡ ಟ್ವಿಸ್ಟ್!

ರಜನೀಕಾಂತ್ ಮತ್ತು ಕಮಲ್ ಹಾಸನ್ ತಮಿಳು ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್​​ಗಳು. ದಶಕಗಳಿಂದಲೂ ಇವರು ಸ್ಟಾರ್​​ಗಳಾಗಿ ಮೆರೆಯುತ್ತಾ ಬಂದಿದ್ದಾರೆ. ಇಬ್ಬರಿಗೂ ಸಹ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇದೀಗ ಈ ಇಬ್ಬರೂ ಸೂಪರ್ ಸ್ಟಾರ್​​ಗಳು ಒಂದೇ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ರಜನಿ-ಕಮಲ್ ಅವರುಗಳು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭವಾಗಿ ತಿಂಗಳುಗಳೇ ಆಗಿದ್ದವು, ಆದರೆ ನಿನ್ನೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಆದರೆ ಒಂದು ಟ್ವಿಸ್ಟ್ ಇದೆ.

ರಜನೀಕಾಂತ್ ಮತ್ತು ಕಮಲ್ ಹಾಸನ್ ಸಿನಿಮಾವನ್ನು ‘ವಿಕ್ರಂ’, ‘ಖೈದಿ’, ‘ಕೂಲಿ’ ಇನ್ನೂ ಕೆಲ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಟ್ರೆಂಡಿಂಗ್ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ಹಿರಿಯ ನಿರ್ದೇಶಕರೊಬ್ಬರನ್ನು, ಇಬ್ಬರು ಸೂಪರ್ ಸ್ಟಾರ್​​ಗಳ ಸಿನಿಮಾ ನಿರ್ದೇಶಿಸಿಲು ಕರೆ ತರಲಾಗಿದೆ. ಮತ್ತೊಂದು ವಿಶೇಷವೆಂದರೆ ರಜನೀಕಾಂತ್-ಕಮಲ್ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಸ್ವತಃ ಕಮಲ್ ಹಾಸನ್ ಅವರೇ ಆಗಿದ್ದಾರೆ.

ಇನ್ನು ಇಬ್ಬರು ಸೂಪರ್ ಸ್ಟಾರ್ ಗಳ ಈ ಸಿನಿಮಾವನ್ನು ಸುಂದರ್ ಸಿ ಅವರು ನಿರ್ದೇಶನ ಮಾಡಲಿದ್ದಾರೆ. 28 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ರಜನೀಕಾಂತ್ ಅವರ ‘ಅರುಣಾಚಲಂ’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಇನ್ನು ಕಮಲ್ ಹಾಸನ್ ಅವರ ಸೂಪರ್ ಹಿಟ್ ಸಿನಿಮಾ ‘ಅನ್ಬೆ ಶಿವಂ’ ಅನ್ನು ಸಹ ಸುಂದರ್ ಸಿ ಅವರೇ ನಿರ್ದೇಶನ ಮಾಡಿದ್ದಾರೆ. ಈಗ ಇವರು ‘ಮೂಕುತ್ತಿ ಅಮ್ಮನ್ 2’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾನಲ್ಲಿ ದುನಿಯಾ ವಿಜಿ ಸಹ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಮ್ಸ್ ವತಿಯಿಂದ ಸಿನಿಮಾದ ನಿರ್ಮಾಣ ಮಾಡಲಾಗುತ್ತಿದೆ. ಇದು ಈ ನಿರ್ಮಾಣ ಸಂಸ್ಥೆಯ 44ನೇ ವರ್ಷವಾಗಿದ್ದು, ಸಿನಿಮಾವನ್ನು ಮಹೇಂದ್ರನ್ ಎಂಬುವರ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ ಕಮಲ್ ಹಾಸನ್.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

.

Leave a Reply

Your email address will not be published. Required fields are marked *