ರಕ್ಷಿತ್ ಶೆಟ್ಟಿ 5 ಸಿನಿಮಾಗಳ ಚಿತ್ರಕತೆ ಜೊತೆ ಬರುವಿದ್ದಾರೆ.

ರಕ್ಷಿತ್ ಶೆಟ್ಟಿ 5 ಸಿನಿಮಾಗಳ ಚಿತ್ರಕತೆ ಜೊತೆ ಬರುವಿದ್ದಾರೆ.

‘ರಿಚರ್ಡ್ ಆಂಟೊನಿ’–‘ಪುಣ್ಯಕೋಟಿ’ ಚಿತ್ರೀಕರಣ ಶೀಘ್ರ ಆರಂಭ.

ರಕ್ಷಿತ್ ಶೆಟ್ಟಿ ಸ್ಯಾಂಡಲ್​​ವುಡ್​​ನ ಇತರೆ ನಾಯಕ ನಟರು ಹಾಗೂ ನಿರ್ದೇಶಕರುಗಳ ರೀತಿಯಲ್ಲ. ಅವರಿಗೆ ಅವರದ್ದೇ ಆದ ಮಾದರಿಯಿದೆ, ಬೇರೆ ನಟರುಗಳ ಅಥವಾ ಸಿನಿಮಾ ರಂಗದ ಸಿದ್ಧ ಮಾದರಿಗಳನ್ನು ಅವರು ಅನುಸರಿಸುವುದಿಲ್ಲ. ‘ಉಳಿದವರು ಕಂಡಂತೆ’ ಅಂಥಹಾ ಕಲ್ಟ್ ಸಿನಿಮಾ ನಿರ್ದೇಶಿಸಿರುವ ರಕ್ಷಿತ್ ಅವರ ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇಷ್ಟೆಲ್ಲ ಇದ್ದರೂ ಸಹ ರಕ್ಷಿತ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ತೆಗೆದುಕೊಂಡಿರುವುದು 12-13 ವರ್ಷ. ನಟನಾಗಿಯೂ ಸಹ ರಕ್ಷಿತ್ ಶೆಟ್ಟಿಗೆ ಹಲವು ಆಫರ್​​ಗಳಿವೆ, ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಯಾರಾಗಿರುವ ನಿರ್ದೇಶಕರು, ನಿರ್ಮಾಪಕರು ಕಡಿಮೆ ಇಲ್ಲ. ಆದರೂ ಸಹ ರಕ್ಷಿತ್ ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಒಮ್ಮೆಲೆ ಕಾಣೆ ಆಗಿಬಿಟ್ಟ ರಕ್ಷಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸಿನಿಮಾದ ಚಿತ್ರಕತೆಗಾಗಿ ‘ಅಂಡರ್​​ಗ್ರೌಂಡ್’ ಆಗಿದ್ದ ರಕ್ಷಿತ್ ಶೆಟ್ಟಿ ಇದೀಗ ಹೊರಗೆ ಬಂದಾಗ ಐದು ಸಿನಿಮಾಗಳ ಸ್ಕ್ರಿಪ್ಟ್ ಹಿಡಿದುಕೊಂಡು ಹೊರಬಂದಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಬರೋಬ್ಬರಿ ಐದು ಸಿನಿಮಾಗಳ ಚಿತ್ರಕತೆಗಳೊಟ್ಟಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ರಿಚರ್ಡ್ ಆಂಟೊನಿ’, ‘ಪುಣ್ಯಕೋಟಿ’ ಜೊತೆಗೆ ಇನ್ನೂ ಮೂರು ಸಿನಿಮಾಗಳ ಚಿತ್ರಕತೆಗಳನ್ನು ರೆಡಿ ಮಾಡಿಕೊಂಡಿದ್ದು, ‘ಚಿತ್ರಕತೆಗಳು ನಾನಂದುಕೊಂಡಂತೆ ಬಂದಿವೆ’ ಎಂದಿದ್ದಾರೆ.

‘ಉಳಿದವರು ಕಂಡಂತೆ’ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ಆಧರಿಸಿದ ಸ್ಪಿನ್ ಓವರ್ ಮಾದರಿಯ ಸಿನಿಮಾವನ್ನು ಇದೀಗ ‘ರಿಚರ್ಡ್ ಆಂಟೊನಿ’ ಮೂಲಕ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಈ ಸಿನಿಮಾನಲ್ಲಿ ರಕ್ಷಿತ್ ಜೊತೆಗೆ ಪ್ರಮೋದ್ ಶೆಟ್ಟಿ ಸಹ ನಟಿಸಲಿದ್ದಾರೆ. ಆದರೆ ಇತರೆ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ರಕ್ಷಿತ್ ಅವರು ಘೋಷಣೆ ಮಾಡಲಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *