ಯಶ್ ಇಲ್ಲದೆ ಲಾಸ್ ಏಂಜಲೀಸ್ನಲ್ಲಿ ‘Ramayana’ ಟೀಸರ್ ಪ್ರಚಾರ.

ಯಶ್ ಇಲ್ಲದೆ ಲಾಸ್ ಏಂಜಲೀಸ್ನಲ್ಲಿ 'Ramayana' ಟೀಸರ್ ಪ್ರಚಾರ.

ರಣಬೀರ್-ಸಾಯಿ ಪಲ್ಲವಿ ನಾಯಕ, ಟೀಸರ್ ಮೆಚ್ಚುಗೆ ಪಡೆದರೂ ಅಭಿಮಾನಿಗಳು ಯಶ್ ನೋಡುವ ನಿರೀಕ್ಷೆಯಲ್ಲಿ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಪಾರ್ಟ್​ ಈ ವರ್ಷ ತೆರೆಗೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರವನ್ನು ಇನ್ನೂ ಆರಂಭಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಇದಕ್ಕೆ ಉತ್ತರವಾಗಿ ಸಿನಿಮಾ ತಂಡ ಪ್ರಚಾರ ಆರಂಭಿಸಿದೆ. ‘ರಾಮಾಯಣ’ ತಂಡ ಇತ್ತೀಚೆಗೆ ಲಾಸ್ ಏಂಜಲೀಸ್​​ಗೆ ತೆರಳಿತ್ತು. ಅಲ್ಲಿ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಈ ಶೋನಲ್ಲಿ ಯಶ್ ಇರಲಿಲ್ಲ.

ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಶೋನಲ್ಲಿ ಭಾಗವಹಿಸಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಗ್ರಾಫಿಕ್ಸ್​​ನ ಹಾಡಿ ಹೊಗಳಿದ್ದಾರೆ. ಈ ವಿಮರ್ಶೆಗಳನ್ನು ಕೇಳಿ ರಣಬೀರ್ ಕಪೂರ್ ಕೂಡ ಖುಷಿಪಟ್ಟಿದ್ದಾರೆ.

‘ಅದ್ಭುತ ವಿಶ್ಯುವಲ್ಸ್’ ಎಂದು ಕೆಲವರು ಹೇಳಿದ್ದಾರೆ. ‘ಈ ಸಿನಿಮಾ ನೋಡಲು ಕಾದಿದ್ದೇವೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ಟೀಸರ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಏಪ್ರಿಲ್ 2ರಂದು ಟೀಸರ್ ಪ್ರೇಕ್ಷಕರ ಎದುರು ಬರಲಿದೆ. ಯಶ್ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

 ‘ರಾಮಾಯಣ’ ಚಿತ್ರಕ್ಕೆ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ರಿಕವರಿ ಮಾಡಲಿದೆಯೇ ಎಂಬುದು ಸದ್ಯದ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ, ಸಿನಿಮಾ ಸೂಕ್ಷ್ಮ ವಿಷಯಗಳ ಮೇಲಿದೆ. ಹೀಗಾಗಿ, ಕಥೆಯಲ್ಲಿ ಕೊಂಚ ಬದಲಾವಣೆ ಆದರೂ ಸಾಕಷ್ಟು ಟ್ರೋಲ್​​​ಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *