‘ರಾಮಾಯಣ’ದಲ್ಲಿ ನಟಿಸಲು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದ ರಣಬೀರ್ : ಯಶ್, ಸಾಯಿ ಪಲ್ಲವಿಗೆ ಸಿಕ್ಕಿದ್ದೆಷ್ಟು?

ramayana movie

‘ರಾಮಾಯಣ’ ಸಿನಿಮಾದ ನಟರ ಸಂಭಾವನೆ ಕುರಿತು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಶ್ರೀರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರೆ, ರಾವಣನಾಗಿ ಯಶ್ ಕೈತುಂಬಾ ಸ್ಯಾಲರಿ ಜೇಬಿಗೆ ಇಳಿಸಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿಗೂ ವೃತ್ತಿ ಜೀವನದ ಅತೀ ಹೆಚ್ಚು ಸಂಭಾವನೆ ಸಿಗುತ್ತಿದೆ.

ಬಾಲಿವುಡ್ ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಈಚೆಗಷ್ಟೇ ರಿಲೀಸ್ ಆದ ‘ರಾಮಾಯಣ’ ಪಾರ್ಟ್ 1ರ ಮೊದಲ ಗ್ಲಿಂಪ್ಸ್ ಸಿನಿಪ್ರಿಯರನ್ನು ಥ್ರಿಲ್ ಮಾಡಿದೆ. ‘ರಾಮಾಯಣ’ ಪಾರ್ಟ್ 1ರ ಶೂಟಿಂಗ್ ಮುಕ್ತಾಯವಾಗಿದ್ದರೂ, ಅದು ತೆರೆಕಾಣುವುದು ಮುಂದಿನ ವರ್ಷದ ದೀಪಾವಳಿ ಹಬ್ಬಕ್ಕೆ! ಅಂದರೆ, 2026ರ ದೀಪಾವಳಿ ಪ್ರಯುಕ್ತ ‘ರಾಮಾಯಣ’ ಪಾರ್ಟ್ 1 ತೆರೆಕಾಣಲಿದೆ. ಈ ಮಧ್ಯೆ ಈ ಚಿತ್ರದ ಕಲಾವಿದರ ಸಂಭಾವನೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

ರಾಮನ ಪಾತ್ರ ಮಾಡಲು ರಣಬೀರ್ ಕಪೂರ್ ಸಂಭಾವನೆ ಎಷ್ಟು?

‘ರಾಮಾಯಣ’ದಲ್ಲಿ ಪ್ರಭು ಶ್ರೀರಾಮನ ಪಾತ್ರಕ್ಕೆ ಬಹಳ ಮಹತ್ವ ಇದೆ. ಇಡೀ ರಾಮಾಯಣ ಇರುವುದೇ ಪ್ರಭು ಶ್ರೀರಾಮನ ಮೇಲೆ. ಅಂತಹ ಮಹತ್ವದ ಪಾತ್ರವನ್ನು ನಟ ರಣಬೀರ್ ಕಪೂರ್ ನಿಭಾಯಿಸುತ್ತಿದ್ದಾರೆ. ಈ ಪಾತ್ರವನ್ನು ಮಾಡುವುದಕ್ಕಾಗಿ ರಣಬೀರ್ ಭರ್ತಿ 150 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ಇದರಲ್ಲಿ ಪಾರ್ಟ್ 1 ಮತ್ತು ಪಾರ್ಟ್ 2ರ ಸಂಭಾವನೆ ಕೂಡ ಸೇರಿದೆ. ಅಲ್ಲಿಗೆ, ಒಂದೊಂದು ಪಾರ್ಟ್ಗೆ ತಲಾ 75 ಕೋಟಿ ರೂಪಾಯಿಗಳನ್ನು ರಣಬೀರ್ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ರಾಕಿ ಭಾಯ್ ಯಶ್ಗೂ ಸಿಗಲಿದೆ ಕೈತುಂಬಾ ಹಣ

ಹೌದು, ‘ರಾಮಾಯಣ’ದ ಮತ್ತೊಂದು ಮಹತ್ವದ ಪಾತ್ರ ಎಂದರೆ, ಅದು ರಾವಣನದ್ದು. ಈ ಲಂಕಾಧಿಪತಿಯ ಪಾತ್ರವನ್ನು ನಿಭಾಯಿಸುತ್ತಿರುವುದು ಕನ್ನಡ ನಟ ಯಶ್. ಈ ಚಿತ್ರಕ್ಕೆ ಅವರು ಸಹ ನಿರ್ಮಾಪಕರಾದರೂ ಕೂಡ, ನಟನಾಗಿ ಅವರ ಪಾಲಿಗೆ 100 ಕೋಟಿ ರೂ. ಸಂಭಾವನೆ ಬರಲಿದೆಯಂತೆ. ಅಂದರೆ, ಒಂದೊಂದು ಪಾರ್ಟ್ಗೆ ತಲಾ 50 ಕೋಟಿ ರೂ. ಹಣವನ್ನು ಯಶ್ ತಮ್ಮ ಜೇಬಿಗೆ ಇಳಿಸಲಿದ್ದಾರೆ ಎಂಬುದು ಸದ್ಯಕ್ಕೆ ಕೇಳಿಬಂದಿರುವ ಟಾಕ್.

ನಟಿ ಸಾಯಿ ಪಲ್ಲವಿಗೆ ಸಿಕ್ಕಿದ್ದೆಷ್ಟು?

ದಕ್ಷಿಣ ಭಾರತದ ಸಿನಿಪ್ರಿಯ ಕ್ರಶ್ ಆಗಿರುವ ನಟಿ ಸಾಯಿ ಪಲ್ಲವಿ ಅವರ ಕರಿಯರ್ನಲ್ಲೇ ದೊಡ್ಡ ಪ್ರಾಜೆಕ್ಟ್ ಎಂದರೆ, ಅದು ‘ರಾಮಾಯಣ’. ಅವರಿಲ್ಲಿ ಸೀತಾ ಮಾತೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅವರಿಗೆ ಈ ಸಿನಿಮಾ 2 ಪಾರ್ಟ್ಗಳಿಂದ ಸಿಗುತ್ತಿರುವ ಹಣ 12 ಕೋಟಿ ರೂ.!

Leave a Reply

Your email address will not be published. Required fields are marked *