ರಶ್ಮಿಕಾ ಮಂದಣ್ಣ ತಾವು ವಿಜಯ್ ದೇವರಕೊಂಡ ಜೊತೆ ಪ್ರೀತಿಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದ್ದು, ಶೀಘ್ರವೇ ವಿಜಯ್ ದೇವರಕೊಂಡ ಜೊತೆಗೆ ವಿವಾಹ ಸಹ ಆಗುತ್ತಿದ್ದಾರೆ. ಆದರೆ ಈ ಖುಷಿಯ ಸಂದರ್ಭದಲ್ಲಿ ಸುಖಾ-ಸುಮ್ಮನೆ ತಮ್ಮ ಮಾಜಿ ಪ್ರೇಮಿಯ ಬಗ್ಗೆ ದೂರುಗಳನ್ನು ಹೇಳಿಕೊಂಡು ಓಡಾಡುತ್ತಿದ್ದು, ಮಾಜಿ ಪ್ರೇಮಿ ಒಬ್ಬ ದುಷ್ಟ ವ್ಯಕ್ತಿ ಎಂಬ ನರೇಟಿವ್ ಸೆಟ್ ಮಾಡುವ ಪ್ರಯತ್ನದಲ್ಲಿ ರಶ್ಮಿಕಾ ಮಂದಣ್ಣ ಇದ್ದಂತಿದೆ. ಆದರೆ ಇದು ಅವರಿಗೇ ಉಲ್ಟಾ ಹೊಡೆದಿದ್ದು, ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿದ್ದಾರೆ. ಆದರೂ ಸಹ ಮಾಜಿ ಪ್ರೇಮಿಯ ಬಗ್ಗೆ ದೂರು ಹೇಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ಸುಮಾ ಕನಕಾಲ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ‘ನೀವು ಯಾರೊಂದಿಗೆ ಇರಬೇಕು ಎಂಬುದನ್ನು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಿ. ಒಮ್ಮೊಮ್ಮೆ ಎಂಥಹಾ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ ಎಂದರೆ ಅಲ್ಲಿ ನಿಮಗೆ ಬೇರೆ ಆಯ್ಕೆ, ಅವಕಾಶಗಳಿಗೆ ಜಾಗವೇ ಇರದಂತೆ ಆಗಿಬಿಡುತ್ತದೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್ನಲ್ಲಿ ಇದ್ದೆ. ಆದರೆ ಈಗ ನಾನು ಒಬ್ಬ ಪಾರ್ಟನರ್ ಜೊತೆಗೆ ಇದ್ದೇನೆ, ಇಲ್ಲಿ ನನಗೆ ಆಯ್ಕೆಗಳಿವೆ, ನನ್ನತನಕ್ಕೆ ಅವಕಾಶ ಇದೆ, ಇಲ್ಲಿ ನಾನು ಖುಷಿಯಾಗಿದ್ದೇನೆ, ಆತ ಖುಷಿಯಾಗಿದ್ದೇನೆ. ನಮ್ಮ ಸುತ್ತ ಇರುವವರೂ ಸಹ ಖುಷಿಯಾಗಿದ್ದಾರೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಹಿಂದೆ ತಾವಿದ್ದ ರಿಲೇಷನ್ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಸಹ ತಮ್ಮ ಈ ಹಿಂದಿನ ರಿಲೇಶನ್ಷಿಪ್ ಕೆಟ್ಟದಾಗಿ ಇತ್ತು, ಏಕಮುಖವಾಗಿತ್ತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು. ಆದರೆ ಅದು ಯಾರೊಂದಿಗಿನ ರಿಲೇಶನ್ಷಿಪ್ ಎಂದು ರಶ್ಮಿಕಾ ಮಂದಣ್ಣ ಹೇಳಿರಲಿಲ್ಲ.
For More Updates Join our WhatsApp Group :
