ರೇಷನ್ ಕಾರ್ಡ್ ನಲ್ಲಿ ನಿಯಮ ಬಲಾವಣೆ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ಅವಕಾಶ..!!

ರಾಜ್ಯದಲ್ಲಿ ಮನೆ ನಡೆಸಿಕೊಂಡು ಹೋಗುವ ಮನೆಯ ಮುಖ್ಯಸ್ಥೆಗೆ ತಿಂಗಳಿಗೆ 2000 ಕೊಡುವ ಯೋಜನೆ ಆಗಿದ್ದು, ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಯಾಕೋ ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೆಂಗಸರಿಗೆ ರೇಷನ್ ಕಾರ್ಡ್ ಸಮಸ್ಯೆ ಎದುರಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮನೆಯ ಮುಖ್ಯಸ್ಥೆ ಎಂದು ಇರಬೇಕಾಗುತ್ತದೆ.

ಗೃಹಲಕ್ಷ್ಮಿ

ಒಂದು ವೇಳೆ ಮನೆಯ ಯಜಮಾನರು ಇದ್ದರೆ, ಆ ಕಾರ್ಡ್ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದ ಸರ್ಕಾರ ಈ ತಿದ್ದುಪಡಿ ಮಾಡಲು ಜನರಿಗೆ ಅವಕಾಶ ಕೊಟ್ಟಿತ್ತು. ಇದಕ್ಕಾಗಿ ಅವಕಾಶವನ್ನು ಕೂಡ ನೀಡಿತ್ತು.. ಮೊದಲಿಗೆ ಈ ತಿದ್ದುಪಡಿ ಮಾಡಲು ಆಗಸ್ಟ್ 16ರವರೆಗು ಸಮಯಕೊಡಲಾಗಿತ್ತು, ಆದರೆ ಈಗ ಆಗಸ್ಟ್ 21ರವರೆಗು ಸಮಯವನ್ನ ವಿಸ್ತರಿಸಲಾಗಿತ್ತು. ಈ ದಿನದ ಒಳಗೆ ಜನರು ತಮಗೆ ಹತ್ತಿರ ಇರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಇಲ್ಲಿಗೆಲ್ಲಾ ಹೋಗಿ ತಮ್ಮ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು ಎಂದು ಸರ್ಕಾರ ಮಾಹಿತಿ ನೀಡಿತ್ತು.

ರಾಜ್ಯದಲ್ಲಿ ಈಗ ಒಟ್ಟು 1.55 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಗಳಿವೆ, ಅವುಗಳ ಪೈಕಿ 1.22 ಕೋಟಿ ರೇಷನ್ ಕಾರ್ಡ್ ಗಳಲ್ಲಿ ಮನೆಯ ಮುಖ್ಯಸ್ಥರ ಹೆಸರು ಮನೆಯ ಯಜಮಾನಿಯ ಹೆಸರೇ ಇದ್ದು , ಇನ್ನುಳಿದ ರೇಷನ್ ಕಾರ್ಡ್ ಗಳಲ್ಲಿ ಮನೆಯ ಮುಖ್ಯಸ್ಥರ ಹೆಸರು ಮನೆಯ ಯಜಮಾನರ ಹೆಸರು ಇದ್ದು, ಅದನ್ನು ತಿದ್ದುಪಡಿ ಮಾಡಿ ಸರಿಪಡಿಸಲು ಸರ್ಕಾರ ಜನರಿಗೆ ಒಂದು ಅವಕಾಶ ನೀಡಿತ್ತು. ಈ ಕೆಲಸಕ್ಕಾಗಿ ಜನರು ತಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ, ತಿದ್ದುಪಡಿಗೆ ಅಪ್ಲಿಕೇಶನ್ ಪಡೆದು, ಅದನ್ನು ಫಿಲ್ ಮಾಡಿ, ಬೇಕಿರುವ ದಾಖಲೆಗಳನ್ನು ನೀಡಬೇಕು.

ಬಯೋಮೆಟ್ರಿಕ್ ಮಾಡಿ ಹಾಗೆಯೇ ಮೂಲಕ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ, ಕಛೇರಿಯಿಂದ ಅಧಿಕೃತ ಸ್ವೀಕೃತಿ ಪಡೆಯಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಗೆ ಆಹಾರ ಇಲಾಖೆ ವತಿಯಿಂದ ಒಂದು SMS ಬರುತ್ತದೆ. ಬಳಿಕ ನೀವು ಸ್ವೀಕೃತಿ ಪತ್ರ ಪಡೆಯುತ್ತೀರಿ. ನಂತರ ಹೆಸರು ಚೇಂಜ್ ಮಾಡಿರುವ ರೇಷನ್ ಕಾರ್ಡ್ ಸಿಗುತ್ತದೆ. ನೀವು ಆನ್ಲೈನ್ ಮೂಲಕ ಈ ಬಗ್ಗೆ ಮಾಹಿತಿ ಪಡೆಯಲು https://ahara.kar.nic.in/ ಈ ಅಧಿಕೃತ ವೆಬ್ಸೈಟ್ ಚೆಕ್ ಮಾಡಬಹುದು.

ಈ ವೆಬ್ಸೈಟ್ ನಲ್ಲಿ ಇ ಸೇವೆಗಳು ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಇದರಲ್ಲಿ ತಿದ್ದುಪಡಿ ಅಥವಾ ಹೊಸ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನಂತರ ಜಿಲ್ಲೆಯನ್ನು ಆಯ್ಕೆ ಮಾಡಿ, ಕೇಳುವ ಮಾಹಿತಿಯನ್ನು ಹಾಕಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.. ನಂತರ ನಿಮ್ಮ ಫಾರ್ಮ್ ಸಬ್ಮಿಟ್ ಮಾಡಿ, ಬಳಿಕ ನಿಮಗೆ ರಿಜಿಸ್ಟರ್ ನಂಬರ್ ಸಿಗುತ್ತದೆ. ಈ ನಂಬರ್ ಇಂದ ನೀವು ಅಪ್ಲಿಕೇಶನ್ ಟ್ರ್ಯಾಕ್ ಮಾಡಬಹುದು. ಪ್ರಸ್ತುತ ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ದಿನ ಮುಗಿದಿದೆ, ಮತ್ತೊಮ್ಮೆ ಏನಾದರೂ ದಿನಾಂಕವನ್ನು ಮುಂದೂಡುತ್ತಾ ಎಂದು ಕಾದು ನೋಡಬೇಕಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *