ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2024 ಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಇದೀಗ ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದಾಗಿ ಪ್ರಾಧಿಕಾರ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KSET) ಈ ವರ್ಷ ಯಾರೆಲ್ಲ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಲು ಕಾಯುತ್ತಿರುವ ಅಭ್ಯರ್ಥಿಗಳು ಕೂಡಲೇ ಸೂಕ್ತ ದಾಖಲಾತಿಗಳ ಸಮೇತ ನೋಂದಣಿ ಮಾಡಿಕೊಳ್ಳಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆನ್ಲೈನ್ ನೋಂದಣಿಯನ್ನು ಜುಲೈ 30ರಿಂದ ಆರಂಭಿಸಿದೆ.
ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.in ನಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಮುಂದಿನ ಆಗಸ್ಟ್ 22 ರವರೆಗೆ ನೋಂದಣಿ ಅವಕಾಶ ಇದೆ.
KSET ಅಭ್ಯರ್ಥಿಗಳು ನೆನಪಿಡಬೇಕಾದ ದಿನಾಂಕಗಳು
* ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನ – 2024 ಜುಲೈ 30
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡೆಯ ದಿನ – 2024ರ ಆಗಸ್ಟ್ 22
* ಅರ್ಜಿ ಶುಲ್ಕ ಸಲ್ಲಿಕೆಯ ಗಡುವಿನ ದಿನಾಂಕ – 2024 ಆಗಸ್ಟ್ 26
* ಕೆಎಸ್ಇಟಿ ಪರೀಕ್ಷೆ ಯಾವಾಗ- 2024 ನವೆಂಬರ್ 24
KSET 2024 ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ವಿಧಾನಗಳು
ಸ್ನಾತಕೋತ್ತರ ಪದವಿ ಮುಗಿಸಿ ತಾವು ಕಲಿತ ಕೋರ್ಸ್ಗಳ ವಿಷಯದಲ್ಲಿ KSET ಬರೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವಿಧಾನಗಳನ್ನು ಈ ಕೆಳಗಿನಂತಿವೆ.
* ಅಭ್ಯರ್ಥಿಗಳು ಮೊದಲು ಕೆಇಎ ಅಧಿಕೃತ ವೆಬ್ಸೈಟ್ https://kea.kar.nic.in ಗೆ ಭೇಟಿ ನೀಡಬೇಕು.
* ಮುಖಪುಟದಲ್ಲಿ KSET ಪರೀಕ್ಷೆಗೆ ನೋಂದಣಿಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಅಪ್ಲಿಕೇಷನ್ ನೋಂದಣಿ ರಚನೆಗೆ ಕೇಳುವ ಅಗತ್ಯ ಮಾಹಿತಿ ನಮೂದಿಸಬೇಕು.
* ನೋಂದಣಿ ಆದ ನಂತರ ನಿಮ್ಮ ಖಾತೆಗೆ ಲಾಗ್ ಇನ್ ಆಗಬೇಕು. ಅಲ್ಲಿ ಕೇಳಲಾಗುವ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು ಹಾಗೂ KSET-2024 ಗೆ ಸಂಬಂಧಿಸಿದ ವಿವರಗಳನ್ನು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
* ನಂತರ ನಿಮ್ಮ ಸ್ನಾತಕೋತ್ತರ ಅಂಕಗಳು, ಉತ್ತೀರ್ಣ ಇನ್ನಿತರ ಕೋರ್ಸ್ ಸಂಬಂಧಿ ತುಂಬಿ. ಬಳಿಕ ಖಚಿತತೆಗಾಗಿ ಅರ್ಜಿ ನಮೂನೆಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳಬೇಕು.
* ನಿಮ್ಮ ಜಾತಿ (ಸಾಮಾನ್ಯ, SC/ST/PWD, ಇತ್ಯಾದಿ) ಪ್ರಕಾರ ಅರ್ಜಿ ಶುಲ್ಕ ನೋಡಿಕೊಂಡು ಪಾವತಿಗಾಗಿ ಸಬ್ಮಿಟ್ ಮಾಡಬೇಕು.
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಯಶಸ್ವಿಯಾದ ನಂತರ ಶುಲ್ಕ ಪಾವತಿ ಪೂರ್ಣಗೊಳಿಸಿ ಬಳಿಕ ನಿಮ್ಮ ದಾಖಲೆಗಳಿಗಾಗಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
(KSET 2024ಗೆ ಅರ್ಜಿ ಸಲ್ಲಿಸಲು ಇಲ್ಲಿನ ಲಿಂಕ್ https://karnemaka.kar.nic.in/uatks/?utm_source=DH-MoreFromPub&utm_medium=DH-app&utm_campaign=DHಗೆ ಭೇಟಿ ನೀಡಬೇಕು)