ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ನೆನೆಸಿ : ವಸಂತ ಕವಿತ

ತುಮಕೂರು : ನಮ್ಮ ದೇಶಕ್ಕೆ ಸ್ವಾತಂತ್ರö್ಯ ಬಂದಿದ್ದರು ನಮ್ಮ ರಾಜ್ಯಕ್ಕೆ ಸ್ವಾತಂತ್ರö್ಯ ಬಂದಿದ್ದು ಸ್ವಲ್ಪ ತಡವಾಗಿ. ಆಗ ಮೈಸೂರು ಸಂಸ್ಥಾನದ ಆಡಳಿತದಲ್ಲಿ ನಾವೇಲ್ಲ ಇದ್ದೇವು. ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ ಸ್ವಾತಂತ್ರö್ಯ ತರಲು ತುಮಕೂರಿನ ಮೂರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹವರ ಸ್ಮರಣೆ ಪ್ರತಿವರ್ಷವು ಆಗಬೇಕು ಎಂದು ಆಗಿನ ಮೈಸೂರು ಈಗಿನ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಅವರ ಮೊಮ್ಮಗಳು ವಸಂತ ಕವಿತ ಹೇಳಿದರು.

ನಗರದಲ್ಲಿ ಸ್ವಾತಂತ್ರö್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯ ಹುತಾತ್ಮರನ್ನು ಸ್ಮರಿಸುವ ಅಂಗವಾಗಿ ಜಿಲ್ಲಾ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಉತ್ತರಾಧಿಕಾರಿಗಳ ಸಂಘದಿAದ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚಾರಣೆಯಲ್ಲಿ ಮಾತನಾಡಿದರು.

ದೇಶಕ್ಕಾಗಿ ಹಾಗೂ ರಾಜ್ಯಕ್ಕೆ ಸ್ವಾತಂತ್ರö್ಯ ತರಲು ಹೋರಾಡಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸುವುದರ ಜೊತೆಗೆ ಮುಂದಿನ ಪೀಳಿಗೆಗೂ ಅವರ ಚರಿತ್ರೆಗಳನ್ನು ತಿಳಿಸುವಂತಹ ಕೆಲಸವಾಗಬೇಕು ಎಂದರು.

ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಪ್ರಾಣತೆತ್ತ ತುಮಕೂರು ಮಹಾನೀಯರು

ತಾವು ಇಂದು ಅನಿಭವಿಸುತ್ತಿರುವ ಸ್ವಾತಂತ್ರ‍್ಯ ಈ ಮಹನೀಯರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲ ಎಂಬ ಅರಿವನ್ನು ಇಂದಿನ ಯುವ ಜನಾಂಗಕ್ಕೆ ಮೂಡಿಸುವ ಮೂಲಕ ದೇಶದ ಸ್ವಾತಂತ್ರ‍್ಯ ಗಳಿಕೆಗಾಗಿ ಬಲಿದಾನ ಮಾಡಿದವರ ಬಗ್ಗೆ ಕೃತಜ್ಞರಾಗಿರುವಂತೆ ಪ್ರೇರೇಪಿಸುವುದು ಇತಿಹಾಸಕಾರರ ಇಂದಿನ ಅತೀ ಮುಖ್ಯ ಕರ್ತವ್ಯಗಳಲ್ಲೊಂದಾಗಿದೆ. ಆದರೆ ದುರ್ದೈವ ವಶಾತ್ ಕೆಲವೇ ಕೆಲವು ರಾಷ್ಟ್ರೀಯ ನಾಯಕರನ್ನು ಹೊರತುಪಡಿಸಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಪ್ರಾಣತೆತ್ತ ಅಸಂಖ್ಯಾತ ಹೋರಾಟಗಾರರ ಸಾಹಸಗಾಥೆಯನ್ನು ಯಾರೂ ವೈಭವೀಕರಿಸಿಲ್ಲ ಎಂದರು.

ವೈಭವೀಕರಿಸುವ ಮಾತು ಹಾಗಿರಲಿ ಇವರ ಬಗ್ಗೆ ಯಾವುದೇ ಸಂಶೋಧನೆಗಳು ಕೂಡ ನಡೆದಿಲ್ಲ ಅದು ಬೇಡ ಕನಿಷ್ಟ ಇತಿಹಾಸದಲ್ಲಿ ಇವರ ಹೆಸರಾದರೂ ದಾಖಲಾಗಿದೆಯೇ ಎಂದು ನೋಡಿದರೆ ಅದು ಕೂಡ ಇಲ್ಲ ಎಂದು ಹೇಳಲು ಅತ್ಯಂತ ವಿಷಾದವಾಗುತ್ತದೆ. ಹೀಗೆ ನಾಡಿನ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಪ್ರಾಣತೆತ್ತ ಅಸಂಖ್ಯಾತ ಹುತಾತ್ಮರಲ್ಲಿ ಮಾರನಗೆರೆಯ ಸಿದ್ದಪ್ಪ, ಹಂದ್ರಾಳಿನ ಹನುಮಂತಪ್ಪ ಮತ್ತು ನಂಜುAಡಪ್ಪ, ತುಮಕೂರಿನ ರಾಮಚಂದ್ರ, ನಂಜುAಡಪ್ಪ ಹಾಗೂ ಗಂಗಪ್ಪ ಸೇರಿದಂತೆ ಆರು ಮಂದಿ ತುಮಕೂರು ಜಿಲ್ಲೆಯವರೆಂಬುದು ನಮ್ಮ ಹೆಮ್ಮೆ ಎಂದರು.

ನಗರದ ರೋಟರಿ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಮಾತನಾಡಿ ನಮ್ಮ ತುಮಕೂರಿನಲ್ಲಿ ಸ್ವಾತಂತ್ರö್ಯ ಹೋರಾಟಗಾರರಿರುವುದು ನಮ್ಮ ಹೆಮ್ಮೆ. ಅವರ ಚರೀತ್ರೆ, ವೀರತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸ ಬೇಕು, ವಿದ್ಯಾರ್ಥಿಗಳು ಮುಖ್ಯವಾಗಿ ಇಂತಹ ಚರಿತ್ರೆ ಸಾರುವ ಮಹನೀಯರ ಸ್ಮರಣಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕು ಎಂದು ತಿಳಿಸಿದರು.

ಈ ವೇಳೆ ಕಾರ್ಯಕ್ರಮ ಆಯೋಜಿಸಿದ್ದ ಅಮರನಾಥ್, ಸ್ವಾತಂತ್ರö್ಯ ಹೋರಾಟಗಾರರು, ಹಿರಿಯ ನಾಗರೀಕರು, ಹಲವು ಶಾಲೆಯ ವಿದ್ಯಾರ್ಥಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *