ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಪ್ಯಾನ್ ಇಂಡಿಯಾ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ರಾಜಮೌಳಿ ಅವರ ಸಹಾಯಕ ನಿರ್ದೇಶಕ ಅಶ್ವಿನ್ ಗಂಗರಾಜು ನಿರ್ದೇಶನದ ಈ ಚಿತ್ರ ತೆಲುಗು ಮೂಲ ಭಾಷೆಯಾಗಿದ್ದು, ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಬಿಡುಗಡೆಯಾದ ಪೋಸ್ಟರ್ನಲ್ಲಿ ರಿಷಬ್ ಬಂಡುಕೋರನಾಗಿ ಕಾಣಿಸಿಕೊಂಡಿದ್ದು, ಚಿತ್ರದ ಕಥಾವಸ್ತುವಿನ ಕುತೂಹಲ ಹೆಚ್ಚಿಸಿದೆ.
‘ಕಾಂತಾರ’ ಚಿತ್ರದ ಬಳಿಕ ರಿಷಬ್ ಶೆಟ್ಟಿ ಮಾರುಕಟ್ಟೆ ಗಗನಕ್ಕೇರಿದೆ. ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆ. ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು, ತೆಲುಗು ಮೂಲ ಭಾಷೆಯಾಗಿದೆ. ರಿಷಬ್ ಕರ್ನಾಟಕದವರಾಗಿರುವುದರಿಂದ ಕನ್ನಡದಲ್ಲೂ ಸಿನಿಮಾ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆ ಇದೆ. ಈ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ರಾಜಮೌಳಿ ಗರಡಿಯಲ್ಲಿ ಪಳಗಿದ ಅಶ್ವಿನ್ ಗಂಗರಾಜು ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಅಶ್ವಿನ್ ಗಂಗರಾಜು ಅವರು ಈ ಮೊದಲು ರಾಜಮೌಳಿ ನಿರ್ದೇಶನದ ‘ಈಗ’ ಹಾಗೂ ‘ಬಾಹುಬಲಿ’ ಚಿತ್ರದ ಒಂದು ಹಾಗೂ ಎರಡನೇ ಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ರಾಜಮೌಳಿ ಅವರಿಂದ ಸಾಕಷ್ಟು ವಿಚಾರಗಳನ್ನು ಅಶ್ವಿನ್ ಕಲಿತಿದ್ದಾರೆ. ಅವರು ಈ ಮೊದಲು ‘ಆಕಾಶವಾಣಿ’ ಹೆಸರಿನ ಸಿನಿಮಾ ಮಾಡಿದ್ದರು. ಈಗ ಅವರಿಂದ ಹೊಸ ಸಿನಿಮಾ ಅನೌನ್ಸ್ ಆಗಿದೆ.