ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ–ತೆಲಂಗಾಣದಲ್ಲೂ ಈ ಸಿನಿಮಾದ ಬಗ್ಗೆ ಭಾರಿ ಹೈಪ್ ಇದೆ. ವಿತರಣೆ ಹಕ್ಕಿಗಾಗಿ ಆಂಧ್ರದ ಆರು ವಿತರಕರು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ.
ಇದೀಗ ತೆಲುಗಿನ ಸ್ಟಾರ್ ಪ್ರಭಾಸ್ ಕೂಡಾ ಈ ಕ್ರೇಜ್‌ನ್ನು ತನ್ನ ಸಿನಿಮಾ ‘ದಿ ರಾಜಾ ಸಾಬ್’ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾದ ಟ್ರೈಲರ್ ಅನ್ನು ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ಚಿತ್ರದೊಂದಿಗೆ ಅಟ್ಯಾಚ್ ಮಾಡಲಾಗುತ್ತಿದೆ. ವಿಶೇಷವಾಗಿ ಇಂಟರ್ವೆಲ್ ವೇಳೆ ಟ್ರೈಲರ್ ಪ್ರದರ್ಶನವಾಗಲಿದೆ.
ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ನಡುವೆ ಈಗಾಗಲೇ ಮೂರು ಸಿನಿಮಾಗಳ ಒಪ್ಪಂದವಿರುವ ಕಾರಣ, ಈ ಯೋಜನೆ ಇಬ್ಬರಿಗೂ ಲಾಭಕಾರಿ. ಪ್ರಭಾಸ್ ಟ್ರೈಲರ್ ನೋಡಲು ಬಂದವರು ‘ಕಾಂತಾರ’ ನೋಡುವ ಅವಕಾಶ ಪಡೆಯಲಿದ್ದಾರೆ, ಮತ್ತೊಂದು ಕಡೆ ‘ಕಾಂತಾರ’ ಪ್ರೇಕ್ಷಕರಿಗೆ ‘ರಾಜಾ ಸಾಬ್ ಪರಿಚಯವಾಗಲಿದೆ.
ದಿ ರಾಜಾ ಸಾಬ್’ ಸಿನಿಮಾ ವಿವರಗಳು:
* ಜಾನರ್: ಹಾರರ್ ಕಾಮಿಡಿ
* ನಿರ್ದೇಶಕ: ಮಾರುತಿ
* ನಟರು: ಪ್ರಭಾಸ್ (ದ್ವಿಪಾತ್ರ – ತಾತ ಮತ್ತು ಮೊಮ್ಮಗ), ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿಧಿ ಕುಮಾರ್
* ವಿಶೇಷ ಪಾತ್ರಗಳು: ಬೊಮನ್ ಇರಾನಿ, ಯೋಗಿ ಬಾಬು, ವೆನ್ನೆಲ ಕಿಶೋರ್
* ಬಿಡುಗಡೆ: 2026ರ ಜನವರಿ
For More Updates Join our WhatsApp Group :
