ಲೈವ್ ಪಂದ್ಯದಲ್ಲೇ ರಿಜ್ವಾನ್‌ಗೆ ಅವಮಾನ.

ಲೈವ್ ಪಂದ್ಯದಲ್ಲೇ ರಿಜ್ವಾನ್‌ಗೆ ಅವಮಾನ.

ನಿಧಾನ ಬ್ಯಾಟಿಂಗ್‌ಗೆ ಅರ್ಧದಲ್ಲೇ ಪೆವಿಲಿಯನ್‌ಗೆ ವಾಪಸ್.

ಟಿ20 ತಂಡದಿಂದ ಹೊರಬಿದ್ದಿರುವ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತೆ ತಂಡ ಕೂಡಿಕೊಳ್ಳುವುದು ಭಾಗಶಃ ಅನುಮಾನವಾಗಿದೆ. ಏಕೆಂದರೆ ಮತ್ತೆ ತಂಡ ಕೂಡಿಕೊಳ್ಳುವ ಇರಾದೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಸೇರಿಕೊಂಡಿದ್ದ ರಿಜ್ವಾನ್ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ರಿಜ್ವಾನ್ ಅವರ ಈ ಕಳಪೆ ಫಾರ್ಮ್​ ಹಾಗೂ ನಿಧಾನಗತಿಯ ಬ್ಯಾಟಿಂಗ್​ನಿಂದ ಬೇಸತ್ತಿರುವ ತಂಡದ ಮ್ಯಾನೇಜ್​ಮೆಂಟ್ ಅವರನ್ನು ಲೈವ್ ಪಂದ್ಯದಲ್ಲಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಪೆವಿಲಿಯನ್​ಗೆ ವಾಪಸ್ ಕರೆಸಿಕೊಂಡಿದೆ. ಈ ಮೂಲಕ ರಿಜ್ವಾನ್ ಬಿಬಿಎಲ್‌ನಿಂದ ನಿವೃತ್ತರಾದ ಮೊದಲ ವಿದೇಶಿ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ರಿಜ್ವಾನ್ ನಿಧಾನಗತಿಯ ಬ್ಯಾಟಿಂಗ್

ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಪಾಕಿಸ್ತಾನಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಜ್ವಾನ್ ಅವರನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಬಿಎಲ್ 15 ಸೀಸನ್‌ಗಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ರಿಜ್ವಾನ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಈ ಆವೃತ್ಇಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಅರ್ಧಶತಕ ಗಳಿಸಲು ವಿಫಲರಾಗಿರುವ ರಿಜ್ವಾನ್, ನಿಧಾನಗತಿಯ ಬ್ಯಾಟಿಂಗ್‌ಗಾಗಿ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬಹುಶಃ ಅವರ ಸ್ಥಿರ ಬ್ಯಾಟಿಂಗ್ ಶೈಲಿಯಿಂದಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ತಾಳ್ಮೆಯ ಕಟ್ಟೆ ಕೊನೆಗೂ ಒಡೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *