ಕಾರವಾರ : ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ಹಣವನ್ನ ಕಾರವಾರ ತಾಲೂಕಿನ ಮಾಜಾಳಿ ಚೆಕ್ಪೊಸ್ಟ್ನಲ್ಲಿ ಜಪ್ತಿ ಮಾಡಲಾಗಿದೆ. ಪೊಲೀಸರಿಂದ ಖಾಸಗಿ ಬಸ್ ತಪಾಸಣೆ ವೇಳೆ ಕಲ್ಪೇಶಕುಮಾರ್, ಬೊಂಬ್ರಾ ರಾಮ್ ಎಂಬುವರ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ.
ಗೋವಾದಿಂದ ಬೆಂಗಳೂರಿಗೆ ಹಣವನ್ನ ಸಾಗಿಸಲು ಯತ್ನಿಸಿದ್ದು, ಇದು Mxon ಎಲೆಕ್ಟ್ರಿಕಲ್ ಹಾರ್ಡ್ವೇರ್ ಕಂಪನಿಗೆ ಸೇರಿದ ದುಡ್ಡು ಎಂಬುದು ದೃಢಪಟ್ಟಿದೆ. ತೆರಿಗೆ ತಪ್ಪಿಸಲು ಬ್ಯಾಗ್‌ನಲ್ಲಿ ಹಣವನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿದ ಹಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
For More Updates Join our WhatsApp Group :




