ತುಮಕೂರು: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಈ ವಿಚಾರ ಜನಸಾಮಾನ್ಯರಿಗೆ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದರೆ ಅವರ ಪೋಷಕರಿಗೆ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಕ್ಷಿಣ ಕನ್ನಡ, ಮಂಗಳೂರು ಎಂಬ ಮೊಹರು ಹಾಕಿರುವ ಅರ್ಜಿಯ ಫೋಟೋ ಹೊಂದಿರುವ ವಾಟ್ಸಪ್ ಸಂದೇಶ ಜನಸಾಮಾನ್ಯರ ಫೋನುಗಳಲ್ಲಿ ಹರಿದಾಡುತ್ತಿದೆ.
ಈ ಸಂದೇಶ ನೋಡಿದ ಜನರು ದಿನನಿತ್ಯ ಜಿಲ್ಲಾಧಿಕಾರಿಯವರ ಕಚೇರಿ, ತಹಸೀಲ್ದಾರ್ ಅವರ ಕಚೇರಿಗಳಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೂರಾರು ಜನರು ಬಂದು ಯೋಜನೆಯ ಬಗ್ಗೆ ವಿಚಾರಿಸುತ್ತಿರುವುದು ಹಾಗೂ ಸಾಕಷ್ಟು ಫೋನ್ ಕರೆಗಳು ಬರುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ, ಈ ಸಂದೇಶವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮಧ್ಯವರ್ತಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದು 10-15 ಅರ್ಜಿಗಳನ್ನು ನೀಡಬೇಕೆಂದು ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಮುಗ್ದ ಜನರನ್ನು ಮರಳು ಮಾಡಿ ಅವರುಗಳಿಂದ ಹಣ ವಸೂಲಿ ಮಾಡುವ ತಂತ್ರವನ್ನು ರೂಪಿಸಿಕೊಂಡಿರುವುದು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.
ಆದರೆ ಈ ಸೌಲಭ್ಯದ ವಾಸ್ತವತೆಯೇ ಬೇರೆಯೇ ಇದೆ. ಈ ಕಾರ್ಯಕ್ರಮವು ಮಕ್ಕಳ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ 2021 ಕಲಂ 2 (58)ರ ಪ್ರಕಾರ ಪ್ರಾಯೋಜಕತ್ವ ಕಾರ್ಯಕ್ರಮವು ಕುಟುಂಬದೊAದಿಗೆ ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ಪೂರಕ ಬೆಂಬಲ, ಹಣಕಾಸು ಅಥವಾ ಇತರೆ ಸಹಕಾರ ಎಂದು ವ್ಯಾಖ್ಯಾನಿಸಲಾಗಿದೆ.
ಈ ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಎರಡು ವರ್ಗಗಳಿದ್ದು, ಅದರಲ್ಲಿ ಮೊದಲನೆಯದು 18 ವರ್ಷದೊಳಗಿನ ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಮುಂದುವರೆಸಲು ಪ್ರಾಯೋಜಕತ್ವ ಬೆಂಬಲವನ್ನು ಒದಗಿಸುವುದು. ಎರಡನೆಯದಾಗಿ ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಶೋಷಣೆ, ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಿ ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ನೆರವಾಗುವಂತಹ ಪ್ರಾಯೋಜಕತ್ವ ಬೆಂಬಲವನ್ನು ಒದಗಿಸುವುದಾಗಿದೆ.
ಫಲಾನುಭವಿಯಾಗಲು ಇರುವ ಮಾನದಂಡಗಳು
1) ಮಕ್ಕಳ ಪಾಲನಾ ಸಂಸ್ಥೆಗಳಿAದ ಕೌಟುಂಬಿಕ ವಾತಾವರಣಕ್ಕೆ ಬಿಡುಗಡೆ ಮಾಡಿದ ಮಕ್ಕಳು
2) ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಬಾಲನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಶಿಫಾರಸ್ಸು ಮಾಡಿದ ರಕ್ಷಣೆ ಮತ್ತು ಪಾಲನೆಯ ಅಗತ್ಯವುಳ್ಳ ಮಕ್ಕಳು
3) ಮಕ್ಕಳ ಕಾಯ್ದೆ 2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ ಅಂದರೆ, ವಸತಿರಹಿತರು ಯಾವುದಾದರೂ ನೈಸರ್ಗಿಕ ವಿಕೋಪಗಳಿಗೆ ಒಳಗಾದ ಸಂತ್ರಸ್ಥರು, ಬಾಲಕಾರ್ಮಿಕರು, ಬಾಲ್ಯವಿವಾಹಕ್ಕೆ ಒಳಗಾದ ಸಂತ್ರಸ್ಥರು, ಮಾನವ ಕಳ್ಳ ಸಾಗಾಣಿಕೆಗೆ ಒಳಗಾದ ಸಂತ್ರಸ್ಥರು, ಹೆಚ್‌ಐವಿ/ ಮಾರಣಾಂತಿಕ ಕಾಯಿಲೆಗೆ ಒಳಗಾದ ಮಕ್ಕಳು, ವಿಶೇಷ ಚೇತನ ಮಕ್ಕಳು, ತಪ್ಪಿಸಿಕೊಂಡಿರುವ ಅಥವಾ ಓಡಿ ಬಂದಿರುವ ಮಗು, ಬಾಲ ಭಿಕ್ಷÄಕರು ಅಥವಾ ಬೀದಿಯಲ್ಲಿ ವಾಸಿಸುತ್ತಿದ್ದರೆ, ಬೆಂಬಲ ಹಾಗೂ ಪುನರ್ವಸತಿಯ ಅಗತ್ಯವಿರುವಂತಹ ಹಿಂಸೆಗೆ ಒಳಪಟ್ಟ ಅಥವಾ ನಿಂದನೆ ಅಥವಾ ಶೋಷಿತ ಮಕ್ಕಳು.
4) ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿAದ ಪರಿತ್ಯಜಿಸಲ್ಪಟ್ಟಿದ್ದರೆ ಅಂತಹ ಅರ್ಹ ಮಕ್ಕಳು
5) ಲೈಂಗಿಕವಾಗಿ ದುರ್ಬಳಕೆಯಾದ ಅರ್ಹ ಸಂತ್ರಸ್ಥ ಮಕ್ಕಳು
6) ವಿಸ್ಕೃತ ಕುಟುಂಬದಲ್ಲಿರುವ ಅನಾಥ ಅರ್ಹ ಮಕ್ಕಳು
7) ಪಿ.ಎಂ.ಕೇರ್ ಫಾರ್ ಚಿಲ್ಡçನ್ ಯೋಜನೆಯಡಿ ಬರುವಂತಹ ಅರ್ಹ ಮಕ್ಕಳು
8) ಜೈಲು ನಿವಾಸಿ ಪೋಷಕರ ಅರ್ಹ ಮಕ್ಕಳು ಫಲಾನುಭವಿಯಾಗಲು ಅರ್ಹರಿರುತ್ತಾರೆ.
ಈ ಮೇಲ್ಕಂಡ ಪಾಲನೆ ಮತ್ತು ರಕ್ಷಣೆ ಅಗತ್ಯವುಳ್ಳ ಮಗು ಎಂದು ಕಂಡುಬAದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೆ ಮಹಡಿ, ಮಹಾತ್ಮಗಾಂಧಿ ಕ್ರೀಡಾಂಗಣ, ಕುವೆಂಪುನಗರ, ತುಮಕೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ.