2019 ಪೂಜೆ ಜೊತೆಲಿಂಕ್‌ನ ಪ್ರಶ್ನೆ; ಎಸ್ಐಟಿ ನಡೆಸಿದ ವಿಚಾರಣೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿದ ಶಬರಿಮಲೆ ಕಳವು ಪ್ರಕರಣದಲ್ಲಿ ‘ಕಾಂತಾರ: ಚಾಪ್ಟರ್ 1’ ನಟ ಜಯರಾಮ್ ಅವರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮೊದಲಾದ ಚಿತ್ರರಂಗದಲ್ಲಿ ಜಯರಾಮ್ ಆ್ಯಕ್ಟೀವ್ ಆಗಿದ್ದಾರೆ. ಶಬರಿಮಲೆಯ ಪ್ರಕರಣದ ಪ್ರಮುಖ ಆರೋಪಿ ಜೊತೆ ಜಯರಾಮ್ ಲಿಂಕ್ ಹೊಂದಿರುವ ಅನುಮಾನ ಇರುವುದರಿಂದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ವಿಚಾರಣೆಯನ್ನು ಕೈಗೊಂಡಿದೆ.
2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿ ಆಗಿದ್ದಾನೆ. ಆತನ ಜೊತೆ ಜಯರಾಮ್ ಒಡನಾಟ ಹೊಂದಿರುವುದರಿಂದ ವಿಚಾರಣೆ ಎದುರಿಸಬೇಕಾಗಿದೆ. ವಿಚಾರಣೆ ವೇಳೆ ಪರಿಯ ಹಾಗೂ ಭೇಟಿ ಬಗ್ಗೆ ಪ್ರಶ್ನೆ ಮಾಡಲಾಗಿದೆಯಂತೆ.
ಉನ್ನಿಕೃಷ್ಣನ್ 2019ರಲ್ಲಿ ಚೆನ್ನೈನಲ್ಲಿ ಪೂಜೆ ಆಯೋಜನೆ ಮಾಡಿದ್ದ. ಈ ಪೂಜೆಯಲ್ಲಿ ಜಯರಾಮ್ ಕೂಡ ಭಾಗಿ ಆಗಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಎಸ್ಐಟಿ ಗಮನಕ್ಕೂ ಬಂದಿದ್ದು, ವಿಚಾರಣೆ ನಡೆಸಿದ್ದಾರೆ.
ಈ ರೀತಿ ಉನ್ನಿಕೃಷ್ಣನ್ ಅವರು ಆಯೋಜನೆ ಮಾಡಿದ ಪೂಜೆಗಳಲ್ಲಿ ಎಷ್ಟು ಬಾರಿ ಜಯರಾಮ್ ಹಾಜರಾಗಿದ್ದರು ಎಂದು ಪ್ರಶ್ನಿಸಲಾಗಿದೆ. ಆರೋಪಿ ಜೊತೆ ಆರ್ಥಿಕ ಅಥವಾ ವೈಯಕ್ತಿಕ ಸಂಬಂಧವಿದೆಯೇ ಎಂದು ಕೇಳಲಾಗಿದೆ. ಸಂಪೂರ್ಣ ವಿಚಾರಣೆ ಆ ಪೂಜೆ ಹಾಗೂ ಅವರ ಪರಿಚಯ ಅಥವಾ ಒಡನಾಟದ ಬಗ್ಗೆ ಮಾತ್ರ ಇತ್ತು ಎನ್ನಲಾಗಿದೆ.
ಜಯರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಅವರು ‘ಘೋಸ್ಟ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರು ಮಲಯಾಳಂನವರೇ ಆದರೂ ಕನ್ನಡವನ್ನು ಶುದ್ಧವಾಗಿ ಮಾತನಾಡುತ್ತಾರೆ. ಪರಭಾಷೆಯಲ್ಲೂ ಸಿನಿಮಾಗಳಿಗೆ ಅವರೇ ಡಬ್ ಮಾಡುತ್ತಾರೆ. ಇದು ಅವರ ಹೆಚ್ಚುಗಾರಿಕೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಜಶೇಖರ ಪಾತ್ರ ಮಾಡಿದ್ದರು.
For More Updates Join our WhatsApp Group :




