ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಾಕಷ್ಟು ಜನಪ್ರಿಯತೆಯ ಜೊತೆಗೆ ಆಗಾಗ್ಗೆ ಟೀಕೆಗಳನ್ನೂ ಎದುರಿಸುತ್ತಾರೆ. ಇದೀಗ ತಾವು ನಡೆಸಿಕೊಡುವ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್ 19’ರ ವೀಕೆಂಡ್ ಕಾ ವಾರ್ ಎಪಿಸೋಡ್ನಲ್ಲಿ ಕೆಲ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಚಲನಚಿತ್ರೋದ್ಯಮದಲ್ಲಿ ಅವರ ಪ್ರಭಾವದ ಬಗ್ಗೆ ದೀರ್ಘಕಾಲದ ಊಹೆಗಳ ಬಗ್ಗೆ ದನಿಯೆತ್ತಿದ್ದಾರೆ.
ಅನೇಕರು ಸಲ್ಮಾನ್ ವೃತ್ತಿಜೀವನವನ್ನು ರೂಪಿಸಿದ್ದಾರೆಂದು ನಂಬುತ್ತಾರೆ, ಕೆಲವರು ಕೊನೆಗೊಳಿಸುತ್ತಾರೆ ಎಂದು ಆರೋಪಿಸಿದ್ದಾರೆ. ಆದ್ರೆ, ‘ಇದ್ಯಾವುದು ನನ್ನ ಕೈಲಿಲ್ಲ’ ಎಂದು ನಟ ಸ್ಪಷ್ಟಪಡಿಸಿದರು.
ನಟಿ ಮತ್ತು ಬಿಗ್ ಬಾಸ್ 13ರ ಸ್ಪರ್ಧಿ ಶೆಹನಾಜ್ ಗಿಲ್ ಅವರು ಕಳೆದ ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸಹೋದರ ಶೆಹಬಾಜ್ ಬಡೇಶ (Shehbaz Badesha) ಅವರನ್ನು ಪರಿಚಯಿಸೋ ಸಲುವಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ಸಂದರ್ಭ ಚರ್ಚೆ ಆರಂಭವಾಯಿತು. ಸಲ್ಮಾನ್ ಅವರೊಂದಿಗೆ ಮಾತನಾಡುತ್ತಾ ಶೆಹನಾಜ್ ಗಿಲ್ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. “ನಾನು ಒಂದು ವಿನಂತಿಯೊಂದಿಗೆ ಬಂದಿದ್ದೇನೆ. ನೀವು ಅನೇಕರ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಸಹಾಯ ಮಾಡಿದ್ದೀರಿ” ಎಂದು ತಿಳಿಸಿದರು.
ಕೂಡಲೇ ಸಲ್ಮಾನ್ ಅವರು ವೃತ್ತಿಜೀವನವನ್ನು ನಿರ್ಮಿಸುವ ಅಥವಾ ಅಂತ್ಯಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆಂಬ ಜನರ ಕಲ್ಪನೆಯನ್ನು ತಳ್ಳಿಹಾಕಿದರು. “ನಾನು ಯಾರ ವೃತ್ತಿಜೀವನವನ್ನೂ ನಿರ್ಮಿಸಿಲ್ಲ. ವೃತ್ತಿಜೀವನ ನಿರ್ಮಿಸೋದು ಆ ಭಗವಂತ. ನಾನಲ್ಲ. ನಾನು ಅನೇಕರ ವೃತ್ತಿಜೀವನ ನಾಶ ಮಾಡಿರುವುದಾಗಿ ಜನರು ನನ್ನ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ” ತಿಳಿಸಿದರು.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH
