ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಗೆ ನೆಟ್ಟಿಗರು ಅಂತಿದ್ದಾರೆ ಸಂತೂರ್ ಮಮ್ಮಿ..!

ಸಿನಿಮಾ : ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಸದ್ಯ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಟಿ ಇತ್ತೀಚಿಗೆ ಚೆಂದದ ಫೋಟೋಶೂಟ್ವೊಂದನ್ನ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್ ನೆಟ್ಟಿಗರ ಗಮನ ಸೆಳೆದಿದೆ.

ಕನ್ನಡ, ಹಿಂದಿ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ನಟಿ ಪ್ರಣಿತಾ ಮದುವೆ, ಸಂಸಾರ, ಮಗಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇವೆಂಟ್ಗಳಲ್ಲಿ ಗೆಸ್ಟ್ ಆಗಿ ಹೋಗಿ ಬರುತ್ತಾರೆ. ಹೊಸ ಬ್ರ್ಯಾಂಡ್ಗಳನ್ನ ಪ್ರಮೋಟ್ ಮಾಡುತ್ತಾರೆ. ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು ಕೂಡ ಒಂದಲ್ಲಾ ಒಂದು ಕೆಲಸದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.

ಇನ್ನೂ ಮದುವೆಯಾಗಿ ಮಗುವಾಗಿದ್ದರು ಕೂಡ ಪ್ರಣಿತಾ ಬಳುಕುವ ಬಳ್ಳಿಯಂತೆ ಆಗಿದ್ದಾರೆ. ಇತ್ತೀಚಗೆ ಹಸಿರು ಬಣ್ಣದ ಸೀರೆಗೆ ಪಿಂಕ್ ಕಲರ್ ಸ್ಲೀವ್ಲೆಸ್ ರವಿಕೆ ತೊಟ್ಟು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಅಂದ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *