ಬೆಂಗಳೂರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು, ಗಾಂಜಾ ಜಪ್ತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಗಂಧದ ತುಂಡುಗಳು ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ. ನಗರದಲ್ಲಿ ಗಂಧದ ದಂಧೆ ಮತ್ತೆ ಶುರುವಾಗಿದ್ದು ರಾಜ್ಯ ಅರಣ್ಯ ಜಾಗೃತದಳ ಸಿಬ್ಬಂದಿ ಗಂಧದ ಮರಗಳ ಕಳವು ಪ್ರಕರಣ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಏ.ಖ.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್ ಮೇಲೆ ರಾಜ್ಯ ಅರಣ್ಯ ಜಾಗೃತದಳ ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.

ಆರೋಪಿಗಳು ನೂರಾರು ಗಂಧದ ತುಂಡುಗಳನ್ನು ಸಂಗ್ರಹಿಸಿ ಅಕ್ರಮ ಸಾಗಾಟಕ್ಕ ಯತ್ನ ನಡೆಸಿದ್ದರು. ಸದ್ಯ ಈಗ ಆರೋಪಿಗಳನ್ನು ಬಂಧಿಸಿ ಗಂಧದ ತುಂಡು ಜಪ್ತಿ ಮಾಡಲಾಗಿದೆ. ಎರಡು ಟನ್ಗೂ ಅಧಿಕ ಗಂಧದ ಮರಗಳನ್ನು ಮರಗಳ್ಳರು ಸಂಗ್ರಹಿಸಿದ್ದು ಹೇಗೆ? ಅಕ್ರಮ ಗಂಧದ ಮರಗಳು ರ‍್ಕಾರದ ಕರ‍್ಖಾನೆ ಸೇರಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೆಂಪೇಗೌಡ ರ‍್ಪೋರ‍್ಟ್ನಲ್ಲಿ 3.5 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ರ‍್ಪೋರ‍್ಟ್ನಲ್ಲಿ 3.5 ಕೆಜಿ ಹೈಡ್ರೊಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿದೇಶದಿಂದ ಅಕ್ರಮವಾಗಿ ಕೆಐಎಬಿಗೆ ಗಾಂಜಾ ತಂದಿದ್ದ ಕೇರಳ ಮೂಲದ ಆರೋಪಿ ಶಾಹನ್ಸಾ ಸಾಹುಲ್ ಅಹ್ಮದ್ನನ್ನು ವಶಕ್ಕೆ ಪಡೆಯಲಾಗಿದೆ.

ಲಗೇಜ್ ಬ್ಯಾಗ್ನಲ್ಲಿ ಅಡಗಿಸಿಕೊಂಡು 3.5 ಕೋಟಿ ಮೌಲ್ಯದ 3.5 ಕೆಜಿ ಹೈಡ್ರೊಪೋನಿಕ್ ಗಾಂಜಾವನ್ನು 6ಇ1056 ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಆರೋಪಿ ತಂದಿದ್ದ. ರ‍್ಪೋಟ್ ನಲ್ಲಿ ಪರಿಶೀಲನೆ ವೇಳೆ ಲಗೇಜ್ನಲ್ಲಿ ಗಾಂಜಾ ಸಿಕ್ಕಿದೆ. ಕರ‍್ನಲ್ಲಿ ಪ್ಯಾಕ್ ಮಾಡಿ ಲಗೇಜ್ ಮಧ್ಯೆ ಗಾಂಜಾ ಇರಿಸಲಾಗಿತ್ತು. ಗಾಂಜಾ ಸಮೇತ ಆರೋಪಿಯನ್ನ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈಡ್ರೋಪೋನಿಕ್ ಗಾಂಜಾಗೆ ಭಾರೀ ಬೆಲೆ ಇದೆ. ಸರ‍್ಯನ ಕಿರಣಗಳು ಬೀಳದೆ ಶೀತ ಪ್ರದೇಶದಲ್ಲಿ ಈ ಗಾಂಜಾವನ್ನ ಬೆಳೆಯಲಾಗುತ್ತೆ. ಫಸ್ಟ್ ಕ್ವಾಲಿಟಿ ಗಾಂಜಾ ಎಂದು ಹೈಡ್ರೋಪೋನಿಕ್ ಗಾಂಜಾ ಮಾರುಕಟ್ಟೆಯಲ್ಲಿ ಹೆಸರು ಪಡೆದಿದೆ. ಶ್ರೀಮಂತರು ಹೆಚ್ಚಾಗಿ ಇದನ್ನು ಖರೀದಿಸುತ್ತಾರೆ.

Leave a Reply

Your email address will not be published. Required fields are marked *