ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ.
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದೆ. ಅತಿಯಾದ ಚಳಿ ಸಿಲಿಕಾನ್ ಸಿಟಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಪ್ರಕರಣಗಳು ಹಾಗೂ ತೀವ್ರ ಉಸಿರಾಟ ಸಮಸ್ಯೆ ಪ್ರಕರಣ ವೈರಲ್ ಫ್ಲೂ ಹರಡುವ ಭೀತಿ ಆರೋಗ್ಯ ಇಲಾಖೆಗೆ ಟೆನ್ಷನ್ ಹೆಚ್ಚಿಸಿದೆ.
ಸಾರಿ, ಐಎಲ್ಐ ಕೇಸ್ ಏರಿಕೆ
ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿರುವ ಸಾರಿ, ಐಎಲ್ಐ ಕೇಸ್ ಹಾಗೂ ವೈರಲ್ ಫ್ಲೂ ಆತಂಕಕ್ಕೆ ಕಾರಣವಾಗಿವೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 133 ಸಾರಿ, 21 ಐಎಲ್ಐ ಹಾಗೂ 3052 ಅಕ್ಯೂಟ್ ಡೈರಿಯಲ್ ಡಿಸೀಸ್ ಪಾಸಿಟಿವ್ ಕಂಡುಬಂದಿವೆ. ಹೀಗಾಗಿ ಐಎಲ್ಐ ಹಾಗೂ ಸಾರಿ ಕೇಸ್ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಸೋಂಕಿತ ಪ್ರಕರಣಗಳ ಟೆಸ್ಟ್ ಮಾಡುವಂತೆ ಮಾರ್ಗಸೂಚಿ ಕೂಡ ನೀಡಲಾಗಿದೆ.
ಚಳಿಗಾಲ ಹಿನ್ನಲೆ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಸೆಲ್ಫ್ ಮೆಡಿಕೇಷನಲ್ಲಿರುವವರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಐಎಲ್ಐ, ಸಾರಿ ಪ್ರಕರಣಗಳ ಬಗ್ಗೆ ಗಮನ ಹರಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಪ್ರತಿ ದಿನ ಕನಿಷ್ಟ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್ಗಳ ಪರೀಕ್ಷೆಗೆ ಸೂಚನೆ ನೀಡಿದೆ.
ರಾಜ್ಯದ ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ಗಳನ್ನು ಇರಿಸಿಕೊಳ್ಳಲು ಸೂಚಿಸಲಾಗಿದೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಮೆಡಿಕೇಷನ್ ಮೇಲೆ ಅವಲಂಬಿತರಾದವರಿಗೆ ಹೆಚ್ಚಿನ ಅಪಾಯ ಇದೆ. ಹೀಗಾಗಿ ಸೆಲ್ಫ್ ಮೆಡಿಕೇಷನ್ ಮಾಡುವಂತೆ ಸೂಚಿಸಿದೆ. ಐಎಲ್ಐ, ಸಾರಿ ಕೇಸ್ ಮಾನಿಟರ್ ಮಾಡಲು ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಇರುವವರನ್ನು ಮಾನಿಟರ್ ಮಾಡಿ ವರದಿ ನೀಡುವಂತೆ, ತುರ್ತು ಚಿಕಿತ್ಸೆಗೆ ಸ್ಪಂದಿಸುವ ಅವಶ್ಯ ಚಿಕಿತ್ಸೆಗಳ ಸಿದ್ಧತೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
For More Updates Join our WhatsApp Group :




