(Scheduled Tribe)ಪರಿಶಿಷ್ಟ ಪಂಗಡದ ರೈತರಿಗೆ Good News..! ನಿಮಗೆ ಸಿಗುತ್ತೆ 2 ಲಕ್ಷ..!

ಪರಿಶಿಷ್ಟ ಪಂಗಡದ (Scheduled Tribe) ಅಭಿವೃದ್ಧಿ ಸಹಾಯಧನ ಕಾರ್ಯಕ್ರಮದಡಿ ಪಾಲಿ, ನೆರಳು ಮನೆ ನಿರ್ಮಾಣ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು 2018-19ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಪಂಗಡದ ಅರ್ಹ ರೈತರು ಪಾಲಿ, ನೆರಳು ಮನೆ ನಿರ್ಮಾಣಕ್ಕಾಗಿ ರೂ.2,11,000/- ಗಳು ವಂತಿಕೆಯನ್ನು ನೀಡಲು ಸಿದ್ಧವಿರುವ ಫಲಾನುಭವಿಗಳು, ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

ಯುವಕ

(Scheduled Tribe)ಪರಿಶಿಷ್ಟ ಪಂಗಡದ ರೈತರಿಗೆ ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವ ಪರಿಶಿಷ್ಟ ಪಂಗಡದ (Scheduled Tribe) ರೈತರು ನೀರಾವರಿ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕ ಹೊಂದಿರಬೇಕು, ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರತಕ್ಕದ್ದು, ಫಲಾನುಭವಿಯ ಹೆಸರಿನಲ್ಲಿ ಪ್ರಸಕ್ತ ಸಾಲಿನ ಪಹಣಿ ಹೊಂದಿರಬೇಕು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು ಫಲಾನುಭವಿಯು ಜಂಟಿ ಖಾತೆ ಹೊಂದಿದಲ್ಲಿ ಕುಟುಂಬದವರ ಒಪ್ಪಿಗೆ ಪತ್ರವನ್ನು ಪಡೆದಿರಬೇಕು.

ಘಟಕ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ, ಮುಚ್ಚಳಿಕೆ ಪತ್ರ ನೀಡಬೇಕು, ಅರ್ಜಿದಾರರಾಗಲಿ, ಕುಟುಂಬದ ಸದಸ್ಯರಾಗಲಿ ಯಾವುದೇ ಇಲಾಖೆ, ನಿಗಮದ ಯೋಜನೆಯಡಿ ಈ ಹಿಂದೆ ಯಾವುದೇ ಸೌಲಭ್ಯವನ್ನು ಪಡೆದಿರಬಾರದು ಹಾಗೂ ಇನ್ನೀತರ ಸಂಬಂಧಿಸಿದ ದಾಖಲೆಗಳು ಹೊಂದಿದ ಪರಿಶಿಷ್ಟ ಪಂಗಡದ ರೈತರು ಅರ್ಜಿಯನ್ನು ಜನವರಿ 23, 2024 ರೊಳಗಾಗಿ ಸಂಬಂಧಿಸಿದ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದಿಂದ ಅರ್ಜಿಯನ್ನು ಪಡೆದು, ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ, 0836-2447201, 9743275987 ಗೆ ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *