ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವಿದ್ಯಾರ್ಥಿ ವೇತನ ನೀಡುತ್ತಿದ್ದು, ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ.
2024-25ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಮತ್ತು ವಸತಿಗಾಗಿ ಸರ್ಕಾರವು ಹಣಕಾಸಿನ ನೆರವು ನೀಡುತ್ತಿದೆ. 1ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಈ ಸಂಬಂಧ ಸಚಿವಾಲಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಕಣೆಯಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ 1,000 ರೂ., 5 ರಿಂದ 8 ನೇ ತರಗತಿ, 1,500, 9 ರಿಂದ 10 ನೇ ತರಗತಿ, 3,000 ರೂ. ಐಟಿಐ ಮತ್ತು ಪಾಲಿಟೆಕ್ನಿಕ್ ಸೇರಿದಂತೆ ವೃತ್ತಿಪರೇತರ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ 6,000 ರೂ. ಹಾಗೂ ವೃತ್ತಿಪರ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ರೂ 25,000 ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆಂದು ತಿಳಿಸಿದೆ.
ಮೆಟ್ರಿಕ್ ಪೂರ್ವ ಅರ್ಜಿಗಳಿಗೆ ಕೊನೆಯ ದಿನಾಂಕ ಆಗಸ್ಟ್ 31 ಹಾಗೂ ಮೆಟ್ರಿಕ್ ನಂತರದ ಅಕ್ಟೋಬರ್ 31 ಆಗಿದೆ. ವಿವರಗಳಿಗಾಗಿ, https://scholarships.gov.in/Students ಗೆ ಭೇಟಿ ನೀಡಬಹುದಾಗಿದೆ. ಫಲಾನುಭವಿಗಳು ಆಧಾರ್-ಸಕ್ರಿಯಗೊಳಿಸಿದ ನೇರ ಲಾಭ ವರ್ಗಾವಣೆಯ ನಗದು ವರ್ಗಾವಣೆ ಯೋಜನೆಯಡಿ (DBT) ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ.