ಮುಂಬೈನಲ್ಲಿ 8–10 ಬಾಲಕಿಯರಿಗೆ ಅ*ಚಾರ ಆರೋಪ.
ಮುಂಬೈ : ಇಡೀ ಮುಂಬೈ ನಗರವನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ವ್ಯಕ್ತಿಯೊಬ್ಬ 10 ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರಾಜನಕ ಔಷಧ ಬೆರೆಸಿ, ಬಳಿಕ ಅತ್ಯಾಚಾರ(Rape)ವೆಸಗಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರಿಸಿಕೊಂಡಿದ್ದ. ಇದೀಗ ಪೊಲೀಸರು ವಿರಾರ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿ, ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಪೊಲೀಸರ ತನಿಖೆಯಿಂದ ಆರೋಪಿಯು ಇಲ್ಲಿಯವರೆಗೆ 8 ರಿಂದ 10 ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯಗಳಲ್ಲಿ ನಿದ್ರಾಜನಕ ಮಾತ್ರೆಗಳನ್ನು ಬೆರೆಸಿ ಮಾದಕ ದ್ರವ್ಯ ನೀಡಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಅವರ ಆಕ್ಷೇಪಾರ್ಹ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.ಕುರಾರ್ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ದೂರು ದಾಖಲಾದ ಆರು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮಹೇಶ್ ರಮೇಶ್ ಪವಾರ್ (45) ಎಂದು ಗುರುತಿಸಲಾಗಿದೆ.ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ತಾವ್ಡೆ ಅವರ ಮಾರ್ಗದರ್ಶನದಲ್ಲಿ ಕುರಾರ್ ಪೊಲೀಸ್ ಪತ್ತೆ ತಂಡವು ವಿರಾರ್‌ನಲ್ಲಿ ಆತನನ್ನು ಬಂಧಿಸಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಗಳು ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ತಂಪು ಪಾನೀಯಗಳನ್ನು ನೀಡುವ ನೆಪದಲ್ಲಿ ಆಮಿಷ ಒಡ್ಡಿ, ಅದರಲ್ಲಿ ಮಾದಕ ಮಾತ್ರೆಗಳನ್ನು ಬೆರೆಸುತ್ತಿದ್ದ ಎನ್ನಲಾಗಿದೆ. ಹೆಣ್ಣುಮಕ್ಕಳು ಪ್ರಜ್ಞೆ ತಪ್ಪಿದ ನಂತರ, ಆತ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ. ನಂತರ ಆರೋಪಿ ಈ ವೀಡಿಯೊಗಳನ್ನು ಬಳಸಿಕೊಂಡು ಅವರನ್ನು ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಎನ್ನಲಾಗಿದೆ.
For More Updates Join our WhatsApp Group :




