ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ಠಾಣೆಯಲ್ಲಿ ಮಹಿಳೆ ನೀಡಿದ ದೂರು ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಂತ್ರಸ್ತೆಯ ವಿರುದ್ಧ ದಾಖಲಾಗಿದ್ದ ಕೇಸ್ನಲ್ಲಿ ಆಕೆಯ ಪರ ವಾದಿಸಿದ್ದ ಮೈಲಾರಪ್ಪ
ಸಂತ್ರಸ್ತೆ 2022ನೇ ಸಾಲಿನ ನವೆಂಬರ್ ತಿಂಗಳಲ್ಲಿ ಅಂದಿನ ಬೆಂಗಳೂರು ವಿ.ವಿ ನಿರ್ದೇಶಕರಾದ ಪ್ರೊಫೇಸರ್ ಶ್ರೀ.ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಲಸಕ್ಕೆ ಸೇರಿದ್ದರು. ಆಗಿನಿಂದ 2 ವರ್ಷ ಅಲ್ಲಿಯೇ ಕೆಲಸ ಮಾಡಿದ್ದರು. ಈ ವೇಳೆ ಆಕೆಯ ಪತಿಯೂ ಅಸಹಜವಾಗಿ ಸಾವನ್ನಪ್ಪಿದ್ದರು. ಈ ವೇಳೆ ಪತಿಯ ಸಾವಿಗೆ ಆಕೆಯೇ ಕಾರಣವೆಂದು ಆಕೆಯ ಅತ್ತೆ, ಮಾವ ದೂರನ್ನೂ ದಾಖಲಿಸಿದ್ದರು. ಅಷ್ಟೇ ಅಲ್ಲದೆ ಸಂತ್ರಸ್ತೆಯ ಹೆಸರಿನಲ್ಲಿದ್ದ ಆಸ್ತಿಯನ್ನು ತಮಗೆ ಬರೆದುಕೊಡುವಂತೆ ಪೀಡಿಸಿದ್ದರು. ಈ ಸಮಯದಲ್ಲಿ ಬಿ.ಸಿ.ಮೈಲಾರಪ್ಪಆಕೆಯ ಗಂಡನ ಸಾವಿನ ಬಗ್ಗೆ ಮಹಾಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ಪರ ವಾದಿಸಿ, ಸಾಕಷ್ಟು ಓಡಾಟ ನಡೆಸಿದ್ದರು.
ಸಾರ್ವಜನಿಕೆರುದೇ ಮಹಿಳೆಯ ಮೇಲೆ ಹಲ್ಲೆ
ಸಂತ್ರಸ್ತೆಯ ತಂದೆಯ ಆಸ್ತಿಯ ಭಾಗದ ವಿಷಯವಾಗಿಯೂ ಹಲವು ಮನಸ್ತಾಪಗಳುಂಟಾಗಿತ್ತು. ತಂದೆ ಆಸ್ತಿಯ ಭಾಗಾಂಶಕ್ಕಾಗಿ ಸಂತ್ರಸ್ತೆ ಅಣ್ಣ , ವಕೀಲರಾದ ರಘು ಎನ್ನುವವರ ಸಹಾಯದಿಂದ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಈ ವಿಷಯವಾಗಿ ವಕೀಲರು ಆಗಾಗ ಸಂತ್ರಸ್ತೆಯನ್ನು ಭೇಟಿ ಮಾಡುವ ಸುದ್ದಿ ತಿಳಿದ ಮೈಲಾರಪ್ಪ ಒಂದು ಹೋಟೆಲ್ ಬಳಿ ಮಾತನಾಡಬೇಕೆಂದು ಸಂತ್ರಸ್ತೆಯನ್ನು ಕರೆಸಿಕೊಂಡಿದ್ದರು. ಭೇಟಿ ಮಾಡಲು ಬಂದಾಗ ಆಕೆಗೆ ಒಂದಿಷ್ಟು ದಾಖಲಾತಿಗಳನ್ನು ನೀಡಿ, ಸಹಿ ಹಾಕುವಂತೆ ಹೇಳಿದ್ದರು. ದಾಖಲಾತಿ ಪರಿಶೀಲಿಸಿದಾಗ, ‘ನನ್ನ ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ವಕೀಲ ರಘು ಕಾರಣ’ ಎಂದು ಬರೆದಿದ್ದನ್ನು ನೋಡಿ, ಸಹಿ ಹಾಕಲು ಸಂತ್ರಸ್ತೆ ನಿರಾಕರಿಸಿದ್ದರು. ಹೀಗೆ ಬರೆದು ಸಹಿ ಹಾಕಿಸಿಕೊಳ್ಳಲು ನೀವು ಯಾರೆಂದು ಆಕೆ ಪ್ರಶ್ನಿಸಿದಾಗ ಕೋಪಗೊಂಡ ಮೈಲಾರಪ್ಪ, ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದರು.
ಇಷ್ಟಕ್ಕೇ ಸುಮ್ಮನಾಗದೇ ಮಹಿಳೆಯ ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದರು. ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿಯೂ ಸಹ ಕಾಮಾಕ್ಷಿಪಾಳ್ಯ ದಲ್ಲಿ ಕೇಸ್ ದಾಖಲಾಗಿತ್ತು. ಆದರೂ ಆಕೆಗೆ ಕರೆ ಮಾಡಿ ಸಹಕರಿಸುವಂತೆ ಬಲವಂತಪಡಿಸಿದ್ದಾಗಿಯೂ ಮಹಿಳೆ ಹೇಳಿಕೊಂಡಿದ್ದಾರೆ. ಮಹಿಳೆಯ ದೂರಿನ ಆಧಾರ ಮೇಲೆ ಬಸವೇಶ್ವರನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರೊ.ಬಿ.ಸಿ.ಮೈಲಾರಪ್ಪ ಬಂಧಿಸಿದ್ದಾರೆ.
For More Updates Join our WhatsApp Group :
