ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್

ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ವಿಡಿಯೋವನ್ನು ಹರಿಬಿಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಈ ವಿಡಿಯೋದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಬೆಂಬಲಿಸಿದವರಿಗೆ ಧವನ್ ಕೃತಜ್ಞತೆ ಸಲ್ಲಿಸಿದ್ದಾರೆ.

‘ನನಗೆ ಒಂದೇ ಒಂದು ಕನಸು ಇತ್ತು. ಅದು ಭಾರತಕ್ಕಾಗಿ ಆಡುವುದಾಗಿತ್ತು. ನಾನು ಅದನ್ನು ಸಾಧಿಸಿದ್ದೇನೆ. ನನ್ನ ಪ್ರಯಾಣಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ ನನ್ನ ಕುಟುಂಬ. ನನ್ನ ಬಾಲ್ಯದ ತರಬೇತುದಾರರು ದಿವಂಗತ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಆಟದ ಪಟ್ಟುಗಳನ್ನು ಕಲಿತಿದ್ದೇನೆ. ಇಷ್ಟು ದಿನ ಕ್ರಿಕೆಟ್ ಆಡಿದ ನನ್ನ ತಂಡಕ್ಕೂ ಧನ್ಯವಾದ ಅರ್ಪಿಸುತ್ತೇನೆ. ನನಗೆ ಮತ್ತೊಂದು ಕುಟುಂಬ ಸಿಕ್ಕಿತು, ನನಗೆ ಎಲ್ಲಾ ಅಭಿಮಾನಿಗಳಿಂದ ಹೆಸರು, ಖ್ಯಾತಿ ಮತ್ತು ಪ್ರೀತಿ ಸಿಕ್ಕಿತು. ಇಡೀ ಕಥೆ ಓದಬೇಕಾದರೆ ಪುಟ ತಿರುವಿ ಹಾಕಬೇಕು ಎಂಬ ಗಾದೆ ಮಾತಿದೆ. ಅದನ್ನೇ ನಾನು ಮಾಡಲಿದ್ದೇನೆ. ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಎಡಗೈ ಬ್ಯಾಟ್ಸಮನ್ ತಿಳಿಸಿದ್ದಾರೆ.

ನಾನು ದೇಶಕ್ಕಾಗಿ ಸಾಕಷ್ಟು ಆಡಿದ್ದೇನೆ. ನನಗೆ ಈ ಅವಕಾಶ ನೀಡಿದ ಬಿಸಿಸಿಐ ಮತ್ತು ಡಿಡಿಸಿಎಗೆ ಆಭಾರಿಯಾಗಿದ್ದೇನೆ. ಇಷ್ಟು ವರ್ಷ ನನಗೆ ಇಷ್ಟು ಪ್ರೀತಿ ನೀಡಿದ ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಧವನ್ ಕೊನೆಯದಾಗಿ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧದ ODI ಸರಣಿಯಲ್ಲಿ ಭಾರತಕ್ಕಾಗಿ ಆಡಿದ್ದರು

Leave a Reply

Your email address will not be published. Required fields are marked *