ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಂದ್ರಾದಲ್ಲಿರುವ ತಮ್ಮ ಪ್ರಸಿದ್ಧ ರೆಸ್ಟೋರೆಂಟ್ ‘ಬಾಸ್ಟಿಯನ್’ ಮುಚ್ಚುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ಮುಚ್ಚುವಿಕೆಯ ಹಿಂದೆ ಆರ್ಥಿಕ ಸಂಕಷ್ಟವಿಲ್ಲ, ಆದರೆ ಒಂದು ದಕ್ಷಿಣದ ಟಚ್ ಇದೆ ಎನ್ನುತ್ತಾರೆ ನಟಿ.
ಶಿಲ್ಪಾ ಶೆಟ್ಟಿ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದು, “ಬಾಸ್ಟಿಯನ್ ಬಾಂದ್ರಾ ಔಟ್ಲೆಟ್ ಈಗ ‘ಅಮ್ಮಕೈ’ ಎಂಬ ಹೊಸ ದಕ್ಷಿಣ ಭಾರತೀಯ ರೆಸ್ಟೋರೆಂಟ್ ಆಗಿ ರೂಪಾಂತರಗೊಳ್ಳಲಿದೆ” ಎಂದು ಘೋಷಿಸಿದ್ದಾರೆ.
“ವದಂತಿಗಳಿಗೆ ಸ್ಪೇಸ್ ಇಲ್ಲ!” – ಶಿಲ್ಪಾ ಸ್ಪಷ್ಟನೆ
“ನಮ್ಮ ಬ್ರ್ಯಾಂಡ್ ಬದಲಾವಣೆಯ ಹಂತದಲ್ಲಿದೆ. ಕೆಲವು ವದಂತಿಗಳು ನಮ್ಮನ್ನು ಚುಟುಕು ಹಿಡಿದರೂ, ನಿಜ ಎಂದರೆ, ಇದು ಹೊಸ ಅಧ್ಯಾಯದ ಆರಂಭ. ಬಾಂದ್ರಾದ ರೆಸ್ಟೋರೆಂಟ್ ಮುಚ್ಚುತ್ತಿರುವುದು ಕೇವಲ ಸ್ಥಳಾಂತರವಷ್ಟೆ,” ಎಂದು ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಸ್ಪಷ್ಟಪಡಿಸಿದರು.
‘ಅಮ್ಮಕೈ’ ದಕ್ಷಿಣದ ರುಚಿಗೆ ಗೇಟ್ ಓಪನ್
ಶೀಘ್ರದಲ್ಲೇ ‘ಅಮ್ಮಕೈ’ ಎಂಬ ದಕ್ಷಿಣ ಭಾರತೀಯ ಔಟ್ಲೆಟ್ ಬಾಂದ್ರಾದಲ್ಲಿ ಶುಭಾರಂಭವಾಗಲಿದೆ. ಇದರ ಜೊತೆಗೆ ಜುಹು ಪ್ರದೇಶದಲ್ಲಿ ಹೊಸ ‘ಬಾಸ್ಟಿಯನ್ ಬೀಚ್ ಕ್ಲಬ್’ ಪ್ರಾರಂಭವಾಗಲಿದೆ.
ವಿವಾದದ ನಡುವೆಯೂ ಬಿಸಿನೆಸ್ ದಿಟ್ಟ ನಡೆ
ಇತ್ತ, ಶಿಲ್ಪಾ ಶೆಟ್ಟಿ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ಲುಕ್ಔಟ್ ನೋಟಿಸ್ ನೀಡಲಾಗಿದ್ದು, ನಟಿಯ ವಿರುದ್ಧ ತನಿಖೆ ನಡೆಯುತ್ತಿದೆ. ಈ ನಡುವೆ ರೆಸ್ಟೋರೆಂಟ್ ಮುಚ್ಚುವ ಸುದ್ದಿ ಕೇಳಿ ಜನತೆ ತೀವ್ರ ಚರ್ಚೆಗೆ ಒಳಪಟ್ಟಿದ್ದರು. ಆದರೆ, ಶಿಲ್ಪಾ ಹೊಸ ಯೋಜನೆಗಳೊಂದಿಗೆ ತನ್ನ ವ್ಯವಹಾರ ವಿಸ್ತರಿಸುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.
For More Updates Join our WhatsApp Group :

