ಮುಂಬೈ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪ್ರತಿಷ್ಠೆಯ ಪ್ರತೀಕವಾಗಿದ್ದ ಬಾಂದ್ರಾದ ಐಷಾರಾಮಿ ರೆಸ್ಟೋರೆಂಟ್‘ಬಾಸ್ಟಿನ್ ಬಾಂದ್ರಾಗೆ ಇದೀಗ ಬೀಗ ಬಿದ್ದಿದೆ. 2016ರಲ್ಲಿ ಆರಂಭಗೊಂಡಿದ್ದ ಈ ರೆಸ್ಟೋರೆಂಟ್ ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿತ್ತು. ಆದರೆ, ಗುರುವಾರ (ಸೆಪ್ಟೆಂಬರ್ 4) ಈ ರೆಸ್ಟೋರೆಂಟ್ ತನ್ನ ಕೊನೆಯ ದಿನಕಂಡಿತು.
‘ಬಾಸ್ಟಿನ್’ ತನ್ನ ಸೀಫುಡ್ ಮೆನು, ಸಸ್ಯಾಹಾರಿ ಮತ್ತು ವಿವಿಧ ಮಾಂಸಾಹಾರ ಅಡುಗೆಗಳಿಂದ ಪ್ರಸಿದ್ಧಿಯಾಗಿತ್ತು. 2023ರಲ್ಲಿ ಇದನ್ನು ಹೊಸ ಜಾಗಕ್ಕೆ ಸ್ಥಳಾಂತರಿಸಿ ದೊಡ್ಡ ಮಟ್ಟದಲ್ಲಿ ಆರಂಭಿಸಲಾಗಿತ್ತು. ದುಬಾರಿ ಹೋಟೆಲ್ ಎಂಬ ಖ್ಯಾತಿ ಕೂಡ ಇದಕ್ಕಿತ್ತು.
ವಂಚನೆ ಕೇಸ್ ಹಿನ್ನೆಲೆ?
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವುದು ಈಗಾಗಲೇ ಸುದ್ದಿಯಲ್ಲಿದೆ. ಉದ್ಯಮಿಯಿಂದ ಪಡೆದ ಸಾಲವನ್ನು ಹಿಂದಿರುಗಿಸಿಲ್ಲ ಎಂಬ ಆರೋಪ ಎದುರಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ.
ಇದರಿಂದಲೇ ‘ಬಾಸ್ಟಿನ್’ಮುಚ್ಚಲು ಕಾರಣವಾಗಿದೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ರೆಸ್ಟೋರೆಂಟ್ ಮುಚ್ಚುವ ಕಾರಣವನ್ನು ಸ್ಪಷ್ಟಪಡಿಸಿಲ್ಲ.
ಶಿಲ್ಪಾ ಶೆಟ್ಟಿ ಸಿನಿಮಾ ಫ್ರಂಟ್‌ನಲ್ಲಿ ಇತ್ತೀಚೆಗಷ್ಟೇ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ ಸಿನಿಮಾದಲ್ಲಿ ನಟಿಸಿದ್ದು, ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಹಿಂದಿನಂತೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಆಯ್ದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
For More Updates Join our WhatsApp Group :