ಸೀನಿಯರ್ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕೊಂದ ಜೂನಿಯರ್!
ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಿನ್ನೆ (ಜನವರಿ 14) ಸಂಜೆ ಈ ಘಟನೆ ನಡೆದಿದ್ದು, ಅಚ್ಚರಿ ಅಂದರೆ 9ನೇ ತರಗತಿ ವಿದ್ಯಾರ್ಥಿಯೇ ತನಗಿಂತ ಒಂದು ವರ್ಷ ಸಿನಿಯರ್ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾನೆ. ನಿಂಗರಾಜ್ ಅವಾರಿ(16) ಕೊಲೆಯಾದ ಬಾಲಕ.
ಇನ್ನು ಈ ಪ್ರಕರಣ ಸಂಬಂಧ ಧಾರವಾಡ ಎಸ್ಪಿ ಗುಂಜನ್ ಆರ್ಯ್ ಪ್ರತಿಕ್ರಿಯಿಸಿದ್ದು, ಕುಂದಗೋಳ ಪಟ್ಟಣದ ಸೊಸೈಟಿ ಜಾಗದಲ್ಲಿ ನಿನ್ನೆ ಸಂಜೆ ಕೊಲೆಯಾಗಿದ್ದು, ಇನ್ನೋರ್ವ ಬಾಲಕನ ಮೇಲೆ ಹಲ್ಲೆಯಾಗಿದೆ. ಜನವರಿ 13 ರಂದು ಗಲಾಟೆ ಮಾಡಿಕೊಂಡಿದ್ದರು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಮೂವರು ಅಪ್ರಾಪ್ತ ಬಾಲಕರು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿ ಬಾಲಕರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದು, ಸೋಶಿಯಲ್ ಮೀಡಿಯಾ ರೀಲ್ಸ್ ಗಳನ್ನು ಕೂಡಾ ಪರಿಶೀಲನೆ ಮಾಡುತ್ತಿದ್ದೇವೆ.ಕೊಲೆ ಮಾಡಿದ ಪ್ರಮುಖ ಆರೋಪಿ ಮತ್ತು ಕೊಲೆಯಾದ ಬಾಲಕ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಒಂಬತ್ತನೇ ತರಗತಿ ವಿದ್ಯಾರ್ಥಿ ಎ 1 ಆರೋಪಿಯಾಗಿದ್ದಾನೆ. ಆತ ತನ್ನದೇ ಶಾಲೆಯಲ್ಲಿ ಓದುತ್ತಿದ್ದ ಎಸ್ ಎಸ್ ಎಲ್ ಸಿ ಹುಡುಗನ ಕೊಲೆ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.
For More Updates Join our WhatsApp Group :




