ಬದಲಾಗುತ್ತಿರುವ ಹವಾಮಾನದಿಂದಾಗಿ ಜ್ವರ–ಶೀತದಂತಹ ಸಣ್ಣ ಪುಟ್ಟ ರೋಗಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ದೇಹ ಆಯಾಸಗೊಂಡಿರುವುದರಿಂದ ಹೆಚ್ಚು ಜನರಿಗೆ ಚಹಾ–ಕಾಫಿ ಕುಡಿಯಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಆದರೆ ತಜ್ಞರು ಜ್ವರವಿದ್ದಾಗ ಕಾಫಿ ಸೇವನೆ ತಪ್ಪಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಏಕೆ ಕಾಫಿ ಒಳ್ಳೆಯದಲ್ಲ?
ಜ್ವರ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯ. ಆದರೆ ಕಾಫಿಯಲ್ಲಿರುವ ಕೆಫೀನ್ ಅಂಶ ದೇಹವನ್ನು ಎಚ್ಚರವಾಗಿರಿಸಿ, ನಿದ್ರೆ ತಪ್ಪಿಸುತ್ತದೆ. ಇದರಿಂದ ಆರೋಗ್ಯ ಚೇತರಿಕೆ ನಿಧಾನಗೊಳ್ಳಬಹುದು.
ನಿರ್ಜಲೀಕರಣದ ಅಪಾಯ
ಕೆಫೀನ್ ಅಧಿಕ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಹೆಚ್ಚಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಆದರೆ ಜ್ವರ ಬಂದಾಗ ದೇಹಕ್ಕೆ ತೇವಾಂಶ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹೀಗಾಗಿ ಕಾಫಿ ಸೇವನೆ ದೇಹದ ಸ್ಥಿತಿ ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಏನು ಮಾಡಬೇಕು?
ಜ್ವರ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮುಖ್ಯ. ಜೊತೆಗೆ ಬೆಚ್ಚಗಿನ ನೀರು, ಗಂಜಿ, ಸೂಪ್ ಮುಂತಾದ ದ್ರವ ಆಹಾರ ಸೇವನೆ ಉತ್ತಮ. ಕೆಫೀನ್ ಇರುವ ಪಾನೀಯಗಳನ್ನು ತಾತ್ಕಾಲಿಕವಾಗಿ ತಪ್ಪಿಸುವುದೇ ಆರೋಗ್ಯಕರ ಎಂದು ವೈದ್ಯರು ಸಲಹೆ ನೀಡುತ್ತಾರೆ.
For More Updates Join our WhatsApp Group :