ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು : ಸ್ಪಷ್ಟನೆ ನೀಡಿದ ಸಿದ್ದಲಿಂಗ ಸ್ವಾಮೀಜಿ

ತುಮಕೂರು : ಸಿದ್ದಗಂಗಾ ಮಠದಲ್ಲಿ 30 ಮಕ್ಕಳಿಗೆ ಎ ಸಿಂಟಮ್ಸ್ ಲಕ್ಷಣದಿಂದ ಕೋವಿಡ್ ಸೋಂಕು ದೃಢಪ್ಪಟ್ಟಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು 30 ಮಕ್ಕಳಿಗೆ  ಕೋವಿಡ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂದು ಪರೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮಠದಲ್ಲಿ 2000 ಮಕ್ಕಳಿದ್ದಾರೆ, ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿದ್ದೇವೆ, ಸದ್ಯ ಮಕ್ಕಳಿಗೆ ಯಾವುದೇ ನೆಗಡಿ ಹಾಗೂ ಕೆಮ್ಮಿನಂತಹ ಲಕ್ಷಣಗಳು ಇಲ್ಲ, ಅವರು ದೈಹಿಕವಾಗಿ ಅರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ ಹಾಗೂ ಮಠಕ್ಕೆ ಬರುವ ಭಕ್ತರಿಗೆ ಯಾವುದೇ ನೀರ್ಭಂದ ಹೇರುವುದಿಲ್ಲ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಹೋಗಬಹುದು ಎಂದು ಸೂಚನೆ ನೀಡಿದ್ದಾರೆ.

ಘಟನೆಯಿಂದ ಭಾವುಕರಾದ ಸ್ವಾಮೀಜಿ, ಕೋವಿಡ್ ಎರಡನೇ ಅಲೆಯು ವಯಸ್ಕರು, ವೃದ್ಧರು ಹಾಗೂ ಮಕ್ಕಳನ್ನು ಬಲಿ ಪಡೆಯುತ್ತಿರುವುದು ಬಹಳ ನೋವಿನ ಸಂಗತಿ, ಔಷಧಿ ಜನರಿಗೆ ಸಿಗುತ್ತಿದೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಮಧ್ಯಮಗಳಲ್ಲಿ ಕೋವಿಡ್ ವಿಚಾರಗಳನ್ನು ನೋಡುತ್ತಿದ್ದರೆ ಹೆಚ್ಚು ದುಃಖವಾಗುತ್ತಿದೆ ಎಂದು ಭಾವುಕರಾದರು.

ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ, ಹಿಂದಿನತೆ ಲಾಕ್ ಡೌನ್ ಮಾಡುವುದು ಕಷ್ಟವಾಗಲಿದೆ, ಅದರಿಂದ ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕು, ಕೋವಿಡ್ ನಿಯಣತ್ರಣಕ್ಕೆ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಹೇಳಿದರು.

Pragati TV Social Connect for more latest u

Leave a Reply

Your email address will not be published. Required fields are marked *