ಬೆಂಗಳೂರು:2023ರರಾಜ್ಯಚುನಾವಣೆಯಲ್ಲಿಕಾಂಗ್ರೆಸ್135 ಸ್ಥಾನಗಳನ್ನು ಗೆದ್ದು ಒಂದುವರ್ಷ ಅಧಿಕಾರದಲ್ಲಿದೆ. ಅತೃಪ್ತಿಯಿಂದ ಸರ್ಕಾರ ಪತನವಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ಸದಸ್ಯರು ಅಸಮಾಧಾನಗೊಂಡರೆ ಸರ್ಕಾರ ಪತನವಾಗಬಹುದು ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರು ಟಿವಿ ಸಂದರ್ಶನದಲ್ಲಿ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಸರ್ಕಾರ ಪತನವಾಗಬಹುದು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೊಳ್ಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಇನ್ನೆರಡು ತಿಂಗಳು ಕಳೆದ ಮೇಲೆ ನಾನು ಹೇಳುತ್ತೇನೆ. 187 ಕೋಟಿಯ ವಾಲ್ಮೀಕಿ ಹಗರಣ, ಮುಡಾ ಅಕ್ರಮ ಸಣ್ಣ ವಿಷಯವಲ್ಲ. ರಾಜ್ಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆದಿದೆ. ಅಧಿಕಾರಕ್ಕೆ ಬಂದ 14 ತಿಂಗಳು ಲೂಟಿ ಮಾಡೋ ಸ್ಟ್ರಾಟಜಿ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ ಅವರಿಗೂ ಕಪ್ಪ ಕಾಣಿಕೆ ಹೋಗಿದೆ. ಸಿದ್ದರಾಮಯ್ಯ ಅವರ ಸರ್ಕಾರವೇ ಇನ್ನೆರಡು ತಿಂಗಳು ಮಾತ್ರ ಇರುವುದು ಖಂಡಿತ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮುಡಾ ಸೈಟ್ ಹಂಚಿಕೆಯ ಅಕ್ರಮ, ವಾಲ್ಮೀಕಿ ಬಹುಕೋಟಿ ಹಗರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದ್ದು, ಹಗರಣಗಳನ್ನ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.
ಅಕ್ರಮವಾಗಿ ಸಿದ್ದರಾಮಯ್ಯ ಕುಟುಂಬಕ್ಕೆ ನಿವೇಶನ ಬಂದಿದೆ. ED, CBIಯಿಂದ ಸಿಎಂ ತಪ್ಪಿಸ್ಕೊಳ್ಳೋಕೆ ಸಾಧ್ಯವಿಲ್ಲ. ವಾಲ್ಮೀಕಿ ಹಗರಣ ಹಣ ಯಾರಿಗೆ ತಲುಪಿದೆ? ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ATM ಮಾಡಿ ಲೂಟಿ ಮಾಡುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಿದ್ದರಾಯ್ಯ ಅವರು ಮಭಯಭೀತರಾಗಿದ್ದು, ನೋಡ್ತಾ ಇರಿ ಸಿದ್ದರಾಮಯ್ಯನೇ ತಪ್ಪಾಗಿದೆ ಅಂತ ಒಪ್ಕೊಳ್ತಾರೆ ಎಂದು ಹೇಳಿದ್ದಾರೆ.
ಇನ್ನೆರಡು ತಿಂಗಳು ಕಾದು ನೋಡಿ ಸಿದ್ದರಾಮಯ್ಯ ಸರ್ಕಾರ ಇರೋದು ಅನುಮಾನ. ವಾಲ್ಮೀಕಿ ಕೋಟಿ, ಕೋಟಿ ಹಗರಣದಲ್ಲಿ ಇನ್ನೂ ದೊಡ್ಡ, ದೊಡ್ಡ ತಲೆಗಳು ಉದುರುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಮಾಡೋದು ನಿಶ್ಚಿತ. ಪಾದಯಾತ್ರೆ ಮಾಡಲು ಕಾಂಗ್ರೆಸ್ ನಾಯಕರಿಂದಲೇ ಒತ್ತಡ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಜೋರಾಗಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.