ರೆಬೆಲ್ ಸ್ಟಾರ್ Ambarish – Prabhas ಮಧ್ಯೆ ಸಾಮ್ಯತೆ.

ರೆಬೆಲ್ ಸ್ಟಾರ್ Ambarish – Prabhas ಮಧ್ಯೆ ಸಾಮ್ಯತೆ.

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿ ಅವರು ಮರೆಯಾದರು.

ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂತ ಇದ್ದವರು ಅಂಬರೀಷ್. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿ ಅವರು ಮರೆಯಾದರು. ಅವರು ಈಗಲೂ ಅನೇಕರ ಫೇವರಿಟ್. ತೆಲುಗಿನಲ್ಲಿ ಪ್ರಭಾಸ್ ಅವರನ್ನು ರೆಬೆಲ್ ಸ್ಟಾರ್ ಎನ್ನುತ್ತಾರೆ. ಈಗಲೂ ಅವರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಈಗ ಇಬ್ಬರ ಮಧ್ಯೆ ಒಂದು ಸಾಮ್ಯತೆ ಇದೆ ಎಂಬ ವಿಷಯ ಗೊತ್ತಾಗಿದೆ.

‘ಆಲ್​ ರೌಂಡರ್’ ಹೆಸರಿನ ಯೂಟ್ಯೂಬ್ ಚಾನೆಲ್ ಅಲ್ಲಿ ಕಾಸ್ಟಿಂಗ್ ನಿರ್ದೇಶಕ ನಂದ ಕೀಶೋರ್ ಮಾತನಾಡಿದ್ದಾರೆ. ಅವರು ತೆಲುಗು ಚಿತ್ರರಂಗವನ್ನು ಹತ್ತಿರದಿಂದ ಕಂಡವರು. ಅವರು ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಅವರನ್ನು ಅಂಬರೀಷ್​ಗೆ ಹೋಲಿಕೆ ಮಾಡಿದ್ದಾರೆ. ಊಟದ ವಿಷಯದಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.

‘ಸೆಟ್​ ಬಾಯ್ ಎಲ್ಲಾದರೂ ಒಂದು ಕಡೆ ಫುಡ್ ತಿಂದಿದ್ದಾನೆ ಎಂದರೆ ಅದನ್ನು ಪ್ರಭಾಸ್ ನೆನಪಿಟ್ಟುಕೊಳ್ಳುತ್ತಾರೆ. ಮುಂದೆ ಆ ಆಹಾರ ತೆಗೆದುಕೊಂಡು ಬಂದಾಗ ಸೆಟ್ ಬಾಯ್​​ನ ಕರೆದು ಅವರಿಗೂ ಕೊಡ್ತಾರೆ. ಇದು ಪ್ರಭಾಸ್ ಹೆಚ್ಚುಗಾರಿಕೆ’ ಎಂದರು ನಂದ ಕಿಶೋರ್.

‘ಆದಿಪುರಷ್’ ಸಿನಿಮಾದ ಶೂಟ್ ಮುಂಬೈನಲ್ಲಿ ನಡೆಯುತ್ತಿತ್ತಂತೆ. ಈ ವೇಳೆ ಪ್ರಭಾಸ್ ಚೆನ್ನೈ ಇಂದ ಊಟ ತರಿಸಿದ್ದರು. ಫ್ಲೈಟ್ ಅಲ್ಲಿ ಓರ್ವನ ಕಳುಹಿಸಿ, ಆತ ಊಟ ತೆಗೆದು ಮತ್ತೆ ಮುಂಬೈಗೆ ಬಂದಿದ್ದ. ಇದು ಪ್ರಭಾಸ್ ಊಟದ ಬಗ್ಗೆ ಇರುವ ಕ್ರೇಜ್.

 ‘ನಮ್ಮಲ್ಲಿ ಅಂಬರೀಷ್ ಇದ್ದರು. ಅವರಿಗೆ ಎಲ್ಲರಿಗೂ ಊಟ ಹಾಕಿಸೋದು ಅಂದ್ರೆ ಇಷ್ಟ ಆಗಿತ್ತು. ಅದೇ ರೀತಿ ಪ್ರಭಾಸ್. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಕಾಲದಿಂದಲೂ ಹಾಗೆಯೇ. ಪ್ರಭಾಸ್ ತಮ್ಮ ಕುಟುಂಬದ ಲೆಗಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ನಂದ ಕಿಶೋರ್ ಹಾಡಿ ಹೊಗಳಿದರು. ಅಂಬರೀಷ್ ಅವರ ಬಗ್ಗೆ ಅನೇಕ ಕಲಾವಿದರು ಮಾತನಾಡಿದ್ದಾರೆ. ಅವರು ನಟನ ಹಾಡಿ ಹೊಗಳಿದ್ದರು. ಅವರ ಫುಡ್ ಕ್ರೇಜ್ ವಿವರಿಸಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *