ಸ್ನಾನಕ್ಕೂ ಮುನ್ನ ಈ ಎಣ್ಣೆ ಮಸಾಜ್ ಮಾಡಿ.
ಚಳಿಗಾಲವು ಚರ್ಮವನ್ನು ಒಣಗಿಸುತ್ತದೆ ಮತ್ತು ತ್ವಚೆಯ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಕೊರೆವ ಈ ಚಳಿಗಾಲದಲ್ಲಿ ತ್ವಚೆಯ ಆರೈಕೆಯ ಬಗ್ಗೆ ತುಸು ಹೆಚ್ಚೇ ಗಮನಹರಿಸಬೇಕು. ಇದಕ್ಕಾಗಿ ಅನೇಕರು ಬಾಡಿ ಲೋಷನ್, ಬಗೆಬಗೆಯ ಉತ್ಪನ್ನಗಳನ್ನು ತ್ವಚೆಗೆ ಹಚ್ಚಿಕೊಳ್ಳುತ್ತದೆ. ಇದು ಮಾತ್ರವಲ್ಲದೆ ಸ್ನಾನಕ್ಕೂ ಮುನ್ನ ಈ ಒಂದು ಎಣ್ಣೆಯನ್ನು ದೇಹಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತಂತೆ. ಹೌದು ಎಳ್ಳೆಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದರಿಂದ ಚರ್ಮ ಇನ್ನಷ್ಟು ಹೊಳೆಯುತ್ತಂತೆ. ಈ ಎಣ್ಣೆಯ ಪ್ರಯೋಜಗಳ ಬಗೆಗಿನ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಎಳ್ಳೆಣ್ಣೆ ಮಸಾಜ್:
ಸ್ನಾನ ಮಾಡುವ ಮೊದಲು ಎಳ್ಳೆಣ್ಣೆಯನ್ನು ಹಚ್ಚಿ ದೇಹಕ್ಕೆ ಲಘು ಮಸಾಜ್ ಮಾಡಬೇಕಂತೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸಗೊಳಿಸುತ್ತದೆ. ಆಯುರ್ವೇದವು ಇದನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಲು ಶಿಫಾರಸು ಮಾಡುತ್ತದೆ.
ಸ್ನಾನ ಮಾಡುವ ಮೊದಲು ಈ ಎಣ್ಣೆಯಿಂದ ಇಡೀ ದೇಹವನ್ನು ನಿಧಾನವಾಗಿ ಮಸಾಜ್ ಮಾಡುವುದರಿಂದ ಚರ್ಮವು ತೇವವಾಗಿರುತ್ತದೆ, ಇದು ತ್ವಚೆಯ ಶುಷ್ಕತೆಯನ್ನು ನಿವಾರಿಸುತ್ತದೆ ಮತ್ತು ಶೀತ ಹವಾಮಾನದ ಹಲವು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಹಾಗಾಗಿ ಪ್ರತಿದಿನ ಸ್ನಾನ ಮಾಡುವ ಮುನ್ನ ದೇಹಕ್ಕೆ ಎಳ್ಳೆಣ್ಣೆ ಹಚ್ಚಿ 10-15 ನಿಮಿಷಗಳ ಮಸಾಜ್ ಮಾಡಿ, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಮನಸ್ಸಿಗೂ ಉಲ್ಲಾಸ ನೀಡುತ್ತದೆ.
ಎಳ್ಳೆಣ್ಣೆಯ ಪ್ರಯೋಜನಗಳೇನು?
ಎಳ್ಳೆಣ್ಣೆಯು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಎಣ್ಣೆಯಿಂದ ದೇಹಕ್ಕೆ ನಿಧಾನವಾಗಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ, ಸ್ನಾಯುಗಳು ಬಲಗೊಳ್ಳುತ್ತದೆ. ಅಲ್ಲದೆ ಈ ಎಣ್ಣೆಯ ನಿಯಮಿತ ಮಸಾಜ್ ಕೀಲು ನೋವು, ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
For More Updates Join our WhatsApp Group :




