15 ದಿನಗಳ ಮಗುವಿಗೆ ಬಾಯಿಗೆ ಗಮ್, ಒಳಗೆ ಕಲ್ಲು ತುಂಬಿ ಕಾಡಿನಲ್ಲಿ ಎಸೆದ ಪಾಪಿಗಳು!

15 ದಿನಗಳ ಮಗುವಿಗೆ ಬಾಯಿಗೆ ಗಮ್, ಒಳಗೆ ಕಲ್ಲು ತುಂಬಿ ಕಾಡಿನಲ್ಲಿ ಎಸೆದ ಪಾಪಿಗಳು!

ರಾಜಸ್ಥಾನ :ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ಅಮಾನವೀಯತೆಯನ್ನೂ ಮೀರಿ ಹೋಗುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೇವಲ 15 ದಿನಗಳ ಪುಟ್ಟ ಶಿಶುವಿನ ಬಾಯಿಗೆ ಗಮ್ ಅಂಟಿಸಿ, ಬಾಯೊಳಗೆ ಕಲ್ಲುಗಳನ್ನು ತುಂಬಿ ಕಾಡಿನಲ್ಲಿ ಎಸೆದ ಪಾಪಿಗಳು ಯಾರೂ ಎಂಬುದು ಇನ್ನೂ ಗೊತ್ತಾಗಿಲ್ಲ.

“ಅಳಬಾರದೆ ಇರಲಿ” ಎಂಬ ಅಮಾನವೀಯ ಯೋಜನೆ!

ಶಿಶುವನ್ನು ನೋಡುವವರು ದಿಗ್ಭ್ರಮೆಗೊಳಗಾದರು. ಪುಟ್ಟ ಶಿಶುವಿನ ಬಾಯಿ ತೆರೆದಾಗ ಒಳಗೆ ಕಲ್ಲುಗಳು, ತುಟಿಗಳ ಮೇಲೆ ಗಮ್ ಅಂಟಿಸಿದ್ದು ಸ್ಪಷ್ಟವಾಯಿತು. ಅಳಲು ಬರುವುದನ್ನು ತಡೆಯಲು ಇದನ್ನು ಪಾಪಿಗಳು ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದನ ಕಾಯುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದ ಮಗು

ಸೀತಾ ಕುಂಡ್ ದೇವಾಲಯದ ಹತ್ತಿರದ ಕಾಡಿನಲ್ಲಿ ದನಗಳನ್ನು ಕಾಯುತ್ತಿದ್ದ ವ್ಯಕ್ತಿಯೊಬ್ಬರು ಈ ಪುಟ್ಟ ಮಗುವನ್ನು ಕಂಡು, ತಕ್ಷಣ ಬಾಯಿಯಿಂದ ಕಲ್ಲು ತೆಗೆದು ಪ್ರಾಣ ಉಳಿಸಿದ್ದಾರೆ. ಶಿಶುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ.

ಪೋಷಕರ ಪತ್ತೆಗಾಗಿ ಪೊಲೀಸರ ನಿಖರ ತನಿಖೆ

ಹೃದಯ ವಿದ್ರಾವಕ ಘಟನೆಯ ಕುರಿತು ಬಿಜೋಲಿಯಾ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು, ಪೋಷಕರ ಪತ್ತೆ, ಹತ್ತಿರದ ಆಸ್ಪತ್ರೆಗಳಲ್ಲಿ ಹೆರಿಗೆ ದಾಖಲೆಗಳ ಪರಿಶೀಲನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಯಾರು ಈ ಪಾಪಿಗಳು?

ಈ ಮಟ್ಟಿಗೆ ದಯೆ ಇಲ್ಲದೆ, ನಿಜಕ್ಕೂ ಯಾರಿಗೆ ಮನಸ್ಸು ಬಂದಿರಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದು ಕೊಲೆಪ್ರಯತ್ನವೋ? ಅವಿರತ ನಿರ್ಲಕ್ಷ್ಯವೋ? ತನಿಖೆಯ ಬಳಿಕ ಮಾತ್ರ ಸತ್ಯ ಬಯಲಾಗಲಿದೆ.

ಮನುಷ್ಯತ್ವದ ಹದಗೆಟ್ಟ ಸ್ಥಿತಿಯ ಸ್ಪಷ್ಟ ನಿದರ್ಶನವೆಂಬಂತಾಗಿರುವ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ಹುಟ್ಟಿಸಿದೆ. ಪುಟ್ಟ ಶಿಶುಗಳೂ ಈಗ “ಸುರಕ್ಷಿತವಲ್ಲ” ಎಂಬ ಅಂಶಕ್ಕೆ ಕಂಬನಿ ಮಿಡಿಯುತ್ತಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *