ರಕ್ತ ಪರಿಚಲನೆಯಿಂದ ಇನ್ಸುಲಿನ್ ನಿಯಂತ್ರಣವರೆಗೂ ಹಲವಾರು ಪ್ರಯೋಜನಗಳು
ನಡಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಆರೋಗ್ಯ ತಜ್ಞರು ಪ್ರತಿ ಗಂಟೆಗೊಮ್ಮೆ 5 ನಿಮಿಷ ನಡೆಯುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ವ್ಯಕ್ತಿ ಒಂದೇ ಸ್ಥಳದಲ್ಲಿ ಕುಳಿತು ದಿನವಿಡೀ ಕೆಲಸ ಮಾಡುತ್ತಾನೆ ಹಾಗಾದಾಗ, ಕಾಲಿನ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ಅವು ನಮ್ಯತೆಯನ್ನು ಕಳೆದುಕೊಳ್ಳುತ್ತವೆ. ಇದು ಇನ್ಸುಲಿನ್ ಪ್ರತಿರೋಧ ಹೊಂದಿರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾಗಿ ಐದು ನಿಮಿಷಗಳ ನಡಿಗೆ ವ್ಯಕ್ತಿಯನ್ನು ಸಕ್ರಿಯವಾಗಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕೆಲಸದ ಸಮಯದಲ್ಲಿಯೂ ಪ್ರತಿ ಗಂಟೆಗೆ ಒಮ್ಮೆ ಐದು ನಿಮಿಷಗಳ ನಡಿಗೆ ಮಾಡಿದರೆ ನೀವು ನಂಬಲು ಅಸಾಧ್ಯವಾದಂತಹ ಪ್ರಯೋಜನಗಳು ನಿಮ್ಮದಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಲಾಭಗಳೇನು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ರಕ್ತ ಪರಿಚಲನೆ ಸುಧಾರಿಸುತ್ತದೆ: ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತಾಗ, ಮೊಣಕಾಲುಗಳ ಕೆಳಗೆ ರಕ್ತ ಸಂಗ್ರಹವಾಗುತ್ತದೆ, ಇದು ನಿಮ್ಮ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಗಂಟೆಗೊಮ್ಮೆ 5 ನಿಮಿಷ ಎದ್ದು ನಡೆಯುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ, ಇದು ಹೃದಯಕ್ಕೆ ಸಾಗಿಸಲ್ಪಡುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ.
ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ: ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವವರು ಸೋಮಾರಿಗಳಾಗಿರುತ್ತಾರೆ. ಅಷ್ಟೇ ಅಲ್ಲ, ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಮನಸ್ಸು ವಿಚಲಿತವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ದೈಹಿಕ ಶಕ್ತಿಯಲ್ಲಿನ ಇಳಿಕೆ. ಹಾಗಾಗಿ ನಡುವೆ ಐದು ನಿಮಿಷಗಳ ಕಾಲ ಎದ್ದು ನಡೆಯುವುದರಿಂದ ಮನಸ್ಸು ನಿರಾಳವಾಗಿ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ.
ಇನ್ಸುಲಿನ್ ಪ್ರತಿರೋಧವನ್ನು ಸರಿಪಡಿಸುತ್ತದೆ: ಮಧುಮೇಹ ಇರುವವರಿಗೆ, ಕಾಲಿನ ಸ್ನಾಯುಗಳ ಚಲನೆಯು ಇನ್ಸುಲಿನ್ ಸ್ರವಿಸುವಿಕೆ ಮತ್ತು ಅದರ ಬಳಕೆಯನ್ನು ನಿಯಂತ್ರಿಸುತ್ತದೆ. ದಿನವಿಡೀ ಒಂದೇ ಕಡೆ ಕುಳಿತಾಗ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ತೂಕವೂ ಹೆಚ್ಚಾಗುತ್ತದೆ. ಇದನ್ನು ತಡೆಯಲು ತಾಸಿಗೆ ಒಮ್ಮೆ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಮಧುಮೇಹ ಇರುವವರಿಗೆ ಮಾತ್ರವಲ್ಲ ಇಲ್ಲದವರಿಗೂ ಪ್ರಯೋಜನಕಾರಿ.
For More Updates Join our WhatsApp Group :
