ಯುರೋಪ್ ಮೂಲದ ದಂಪತಿ ನಿರಾಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಸಮಸ್ಯೆಗಳ ಬಗ್ಗೆ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು, ವಿದೇಶಿಗರು ಕೂಡ ಪೋಸ್ಟ್ ಮಾಡಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಆದ್ರೂ ಇನ್ನು ಕೂಡ ಬೆಂಗಳೂರು ರಸ್ತೆ ಸುಧಾರಿಸಿಲ್ಲ. ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಗಳನ್ನು ಮಾಡುತ್ತೇವೆ. ವೈಟ್ ಟ್ಯಾಪಿಂಗ್ ಕಾಮಗಾರಿಗಳು ಜೂನ್ 2026ರೊಳಗೆ ಮುಕ್ತಾಯಗೊಳ್ಳಲಿದ್ದು, ನಗರದ ಮುಖ್ಯ ರಸ್ತೆಗಳು ಸುಧಾರಣೆಗೊಳ್ಳಲಿವೆ ಎಂದೆಲ್ಲ ಹೇಳಿದರು. ಆದರೆ ಇನ್ನು ಯಾವುದೇ ಕೆಲಸ ಆರಂಭವಾಗಿರುವಂತೆ ಕಾಣುತ್ತಿಲ್ಲ. ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ಯೂರೋಪನಲ್ಲಿದ್ದ ಭಾರತೀಯ ಮೂಲದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದು ಹಂಚಿಕೊಂಡಿದ್ದಾರೆ. ಯುರೋಪಿಯನ್ ರಾಜಧಾನಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ ದಂಪತಿಗಳು ಭಾರತಕ್ಕೆ ಬಂದಿದ್ದಾರೆ, ಹೊಸ ಜೀವನ ಕಟ್ಟಿಕೊಳ್ಳಲು ಕರ್ನಾಟಕ ರಾಜಧಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ನಮಗೆ ಬೆಂಗಳೂರಿನ ರಸ್ತೆಯ ಬಗ್ಗೆ ತುಂಬಾ ನಿರಾಸೆ ಉಂಟು ಮಾಡಿದೆ ಎಂದು ಪೋಸ್ಟ್ಗೆ ಶೀರ್ಷಿಕೆಯೊಂದನ್ನು ನೀಡಿದ್ದಾರೆ. 30 ದಶಕದ ನಂತರ ಈ ದಂಪತಿ ಭಾರತಕ್ಕೆ ಬಂದಿದ್ದಾರೆ. ಮುಂಬರುವ ವರ್ಷಗಳಲ್ಲಿ ತಮ್ಮ ಕುಟುಂಬದ ಜತೆ ಬೆಂಗಳೂರಿನಲ್ಲಿ ಜೀವನ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಭಾರತದ ಇತರ ಸಿಟಿಗಳಿಂತ ಬೆಂಗಳೂರು ಉತ್ತಮ ಎಂದುಕೊಂಡಿದ್ದರು, ಆದರೆ ಇದೀಗ ಇಲ್ಲಿನ ರಸ್ತೆಗಳನ್ನು ನೋಡಿ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ತಂಗಿದ್ದ ದಂಪತಿಗಳು, ಅಲ್ಲಿನ ಕೆಲವು ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ಹೊರ ವರ್ತುಲ ರಸ್ತೆಯ ಉದ್ದಕ್ಕೂ ಐಟಿ ಕಂಪನಿಗಳು ಇರುವ ಕಾರಣ, ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದು ದಾಖಲೆಗಳಲ್ಲಿ ಮಾತ್ರ ಸರಿಯಾಗಿದೆ. ನೇರವಾಗಿ ನೋಡಿದಾಗ, ತುಂಬಾ ಕೆಟ್ಟ ಅನುಭವವನ್ನು ನೀಡಿದೆ ಎಂದು ಹೇಳಿದ್ದಾರೆ.
For More Updates Join our WhatsApp Group :




