ಭಾರತದಲ್ಲಿ ಪಿಎನ್ಜಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್ಪಿಜಿ ಬಿಕ್ಕಟ್ಟು.
ನವದೆಹಲಿ: ಎಲ್ಪಿಜಿ ಪೂರೈಕೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಈಗ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಹೆಚ್ಚಿಸಲು ಅನಿವಾರ್ಯವಾಗಿಸಿದೆ. ಸರ್ಕಾರವು ನೈಸರ್ಗಿಕ ಅನಿಲ ಸೌಕರ್ಯಗಳಾದ ಪಿಎನ್ಜಿ ಮತ್ತು ಸಿಎನ್ಜಿ ಲಭ್ಯತೆ ಹೆಚ್ಚಿಸಲು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬೇಕಾದ ಸುಧಾರಣೆಗಳನ್ನು ತರುತ್ತಿದೆ. ಪಿಎನ್ಜಿ ಸೌಕರ್ಯವನ್ನು ವೇಗವಾಗಿ ಹೆಚ್ಚಿಸಲು ಈ ಸುಧಾರಣೆ ತರಲಾಗಿದೆ. ಈ ಸಂಬಂಧ ಸರ್ಕಾರವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶ 2026 ಅನ್ನು ಹೊರಡಿಸಿದೆ.
ವಿವಿಧ ಪ್ರದೇಶಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಹಾಕಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳಿಗೆ ಅನೇಕ ತಡೆಗಳು, ಸಮಸ್ಯೆಗಳಿವೆ. ಭೂಮಿ ಸಿಗದೇ ಇರುವುದು, ಅನುಮೋದನೆ ದೊರಕದೇ ಇರುವುದು, ಅಧಿಕ ಶುಲ್ಕ ಇರುವುದು ಇತ್ಯಾದಿ ತಡೆಗಳನ್ನು ನಿವಾರಿಸಿ, ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಪೈಪ್ಲೈನ್ ಅಳವಡಿಸುವ ಕಾರ್ಯಗಳನ್ನು ಸುಗಮಗೊಳಿಸಲು ಸರ್ಕಾರವು ಏಕರೀತಿಯ ಒಂದು ಫ್ರೇಮ್ವರ್ಕ್ ರೂಪಿಸುವುದು ಅಗತ್ಯ ಇದೆ ಎಂದು ಪೆಟ್ರೋಲಿಯಂ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿದೂಗಿಸಲು ಸರ್ಕಾರವು ನೈಸರ್ಗಿಕ ಅನಿಲದತ್ತ ಗಮನ ಹರಿಸಿದೆ. ನ್ಯಾಚುರಲ್ ಗ್ಯಾಸ್ಗೆ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ, ಎಲ್ಪಿಜಿಗೆ ಹೋಲಿಸಿದರೆ ಎಲ್ಎನ್ಜಿ ಮತ್ತು ಪಿಎನ್ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಪಿಎನ್ಜಿ ಅಥವಾ ಪೈಪ್ಡ್ ಗ್ಯಾಸ್ ನೆಟ್ವರ್ಕ್ ಎಲ್ಲೆಡೆ ಸಾಕಷ್ಟು ಮಟ್ಟದಲ್ಲಿ ಲಭ್ಯ ಇಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ.
ಈ ಆದೇಶವು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ಸಿಗಲಿದೆ. ತ್ವರಿತವಾಗಿ ಪೈಪ್ಲೈನ್ಗಳನ್ನು ಅಳವಡಿಸಲು ಸಾಧ್ಯವಾಗಬಹುದು. ಇದರಿಂದ ಜನರನ್ನು ಎಲ್ಪಿಜಿಯಿಂದ ಪಿನ್ಜಿ ಸಂಪರ್ಕಕ್ಕೆ ವರ್ಗಾಯಿಸುವುದು ಸುಲಭವಾಗುತ್ತದೆ. ಎಲ್ಪಿಜಿ ತಂದಿರುವ ಬಿಕ್ಕಟ್ಟು ಈಗ ಪಿಎನ್ಜಿ ಸೌಕರ್ಯ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.
For More Updates Join our WhatsApp Group :




