ಉತ್ತರ ಪ್ರದೇಶ : ಅಮ್ಮನನ್ನು ಅಪ್ಪ ಲೈಟರ್ನಿಂದ ಸುಟ್ಟು ಕೊಲೆಮಾಡಿದ್ದಾರೆ ಎಂದು ಮಗ ತಂದೆಯ ವಿರುದ್ಧ ಹೇಳಿಕೆ ನೀಡಿದ್ದಾನೆ. ಗ್ರೇಟರ್ ನೋಯ್ಡಾದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ವಿಚಾರಣೆ ಸಮಯದಲ್ಲಿ 6 ವರ್ಷದ ಬಾಲಕ ಸಂಪೂರ್ಣ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಅಪ್ಪ ತನ್ನ ತಾಯಿಯನ್ನು ತನ್ನ ಮುಂದೆಯೇ ಕೊಂದಿರುವುದಾಗಿ ತಿಳಿಸಿದ್ದಾನೆ. ಆಕೆಗೆ ನೀಡಿರುವ ಹಿಂಸೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಆ ಭಯಾನಕ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ತನ್ನ ತಂದೆ ಮತ್ತೆ ಅಜ್ಜಿ ಸೇರಿ ಅಮ್ಮನ ಮೇಲೆ ಏನೋ ಸುರಿದು , ಕಪಾಳಮೋಕ್ಷ ಮಾಡಿ ಲೈಟರ್ನಿಂದ ಬೆಂಕಿ ಹಚ್ಚಿದ್ದರು ಎಂದು ಬಾಲಕ ಹೇಳಿದ್ದಾನೆ.
ಈ ಭಯಾನಕ ಘಟನೆಯ ಎರಡು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ ವ್ಯಕ್ತಿ ಮತ್ತು ಮಹಿಳೆಯೊಬ್ಬರು ಬಾಲಕನ ತಾಯಿ(ನಿಕ್ಕಿ) ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ಮನೆಯ ಹೊರಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಳಿಂದ ಕುಂಟುತ್ತಾ ಇಳಿಯುವುದನ್ನು ಕಾಣಬಹುದು.
ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿರ್ಸಾ ಗ್ರಾಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ಮೃತರ ಅಕ್ಕ ಕಾಂಚನ್ ಸೆರೆ ಹಿಡಿದಿದ್ದಾರೆ. ಬಳಿಕ ಅವರು ಮಾತನಾಡಿ, ತನ್ನ ತಂಗಿಗೆ ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು.
ಗುರುವಾರ ರಾತ್ರಿ, ಆಕೆಯನ್ನು ತೀವ್ರವಾಗಿ ಥಳಿಸಿ ಬೆಂಕಿ ಹಚ್ಚಲಾಯಿತು. ಕಳೆದ ಹಲವು ದಿನಗಳಿಂದ ವರದಕ್ಷಿಣೆಗಾಗಿ ನಮ್ಮನ್ನು ಥಳಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು. ಅವರು 36 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ. ಮೃತ ಮಹಿಳೆಯ ಸಹೋದರಿ ಕಾಂಚನ್ ವಿಪಿನ್ ಸಹೋದರನ ಪತ್ನಿ.
ಅವರು ತನ್ನ ತಂಗಿಯ ಕುತ್ತಿಗೆ ಹಾಗೂ ತಲೆಗೆ ಹೊಡೆದು ಆಕೆಯ ಮೇಲೆ ಆ್ಯಸಿಡ್ ಎರಚಿದ್ದರು. ನಮ್ಮ ಮಕ್ಕಳು ಸಹ ಅದೇ ಮನೆಯಲ್ಲಿದ್ದರು. ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಅವರು ನನ್ನ ಮೇಲೆ ಕೂಡ ಹಲ್ಲೆ ನಡೆಸಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.
For More Updates Join our WhatsApp Group :



