ಬೆಂಗಳೂರಿನಿಂದ ಬೆಳಗಾವಿ, ಹುಬ್ಬಳ್ಳಿ, ವಿಜಯಪುರಕ್ಕೆ ವಿಶೇಷ ರೈಲು : ವೇಳಾಪಟ್ಟಿ ಮಾಹಿತಿ ಇಲ್ಲಿದೆ ನೋಡಿ

ನವದೆಹಲಿ || ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ ಹೊಸ ಸೌಲಭ್ಯ: ಭಾರತೀಯ ರೈಲ್ವೆ ಪ್ರಯೋಗ ಯಶಸ್ವಿ

Indian Railway

ಹುಬ್ಬಳ್ಳಿಪ್ರಯಾಣಿಕ ದಟ್ಟಣೆ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಎಸ್‌.ಎಂ.ವಿ.ಟಿ ಬೆಂಗಳೂರು ನಿಲ್ದಾಣದಿಂದ ಬೆಳಗಾವಿ, ವಿಜಯಪುರ ಹಾಗೂ ಹುಬ್ಬಳ್ಳಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06551: ಎಸ್‌.ಎಂ.ವಿ.ಟಿ. ಬೆಂಗಳೂರು – ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್‌ 7, 9, 14 ಮತ್ತು 16ರ ಸಂಜೆ 07:00 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 08:25ಕ್ಕೆ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 06552: ಬೆಳಗಾವಿ – ಎಸ್‌.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್‌ 8, 10, 15 ಮತ್ತು 17ರ ಸಂಜೆ 05:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 05:00 ಗಂಟೆಗೆ ಎಸ್‌.ಎಂ.ವಿ.ಟಿ. ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಎಲ್ಲೆಲ್ಲಿ ನಿಲುಗಡೆ?: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌.ಎಂ.ಎಂ. ಹಾವೇರಿ, ಎಸ್‌.ಎಸ್‌.ಎಸ್‌. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ.

ಈ ರೈಲು ಎರಡು ಎ.ಸಿ.2 ಟಯರ್ ಕೋಚ್​ಗಳು, ಮೂರು ಎಸಿ 3-ಟಯರ್ ಕೋಚ್​ಗಳು, ಹತ್ತು ಸ್ಲೀಪರ್ ದರ್ಜೆಯ ಕೋಚ್​ಗಳು, ಮೂರು ದ್ವಿತೀಯ ದರ್ಜೆಯ ಕೋಚ್​ಗಳು ಮತ್ತು ಎರಡು ಲಗೇಜ್-ಕಂ-ಬ್ರೇಕ್ ವ್ಯಾನ್‌ಗಳನ್ನು ಹೊಂದಿರಲಿದೆ.

ಹುಬ್ಬಳ್ಳಿಬೆಂಗಳೂರು ನಡುವೆ ವಿಶೇಷ ರೈಲುಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ನೈರುತ್ಯ ರೈಲ್ವೆಯು ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ಎಸ್.ಎಂ.ವಿ.ಟಿ.ಬೆಂಗಳೂರು ಹಾಗೂ ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಓಡಿಸಲಿದೆ.

ರೈಲು ಸಂಖ್ಯೆ 07375: ಈ ವಿಶೇಷ ರೈಲು ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಎಸ್.ಎಸ್. ಹುಬ್ಬಳ್ಳಿ ನಿಲ್ದಾಣದಿಂದ ಹೊರಡಲಿದ್ದು, ಅದೇ ದಿನ ರಾತ್ರಿ 07.45 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣ ತಲುಪಲಿದೆ. ಮಾರ್ಗ ಮಧ್ಯೆ ಎಸ್.ಎಂ.ಎಂ. ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.

ಈ ರೈಲು ಒಂದು ಫಸ್ಟ್ ಎ.ಸಿ. ಕಂ ಎ.ಸಿ. 2-ಟಯರ್ ಕೋಚ್, ಒಂದು ಎ.ಸಿ. 2-ಟಯರ್ ಕೋಚ್, ಮೂರು ಎ.ಸಿ. 3-ಟಯರ್ ಕೋಚ್, ಎಂಟು ಸ್ಲೀಪರ್ ದರ್ಜೆಯ ಕೋಚ್, ಐದು ದ್ವಿತೀಯ ದರ್ಜೆಯ ಕೋಚ್ ಮತ್ತು ಎರಡು ಲಗೇಜ್-ಕಂ-ಬ್ರೇಕ್ ವ್ಯಾನ್​ಗಳನ್ನು ಹೊಂದಿರಲಿದೆ.

ಬೆಂಗಳೂರುವಿಜಯಪುರ ಮಧ್ಯೆ ರೈಲು:

ರೈಲು ಸಂಖ್ಯೆ 06589: ಎಸ್.ಎಂ.ವಿ.ಟಿ. ಬೆಂಗಳೂರಿಂದ ಆಗಸ್ಟ್ 14ರ ರಾತ್ರಿ 9 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 10.45 ಗಂಟೆಗೆ ವಿಜಯಪುರ ತಲುಪಲಿದೆ.

ರೈಲು ಸಂಖ್ಯೆ 06590: ಇದು ವಿಜಯಪುರ ರೈಲು ನಿಲ್ದಾಣದಿಂದ ಆಗಸ್ಟ್ 17 ರಂದು ಸಂಜೆ 5.30 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.10ಕ್ಕೆ ಎಸ್.ಎಂ.ವಿ.ಟಿ.ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಮಾರ್ಗದಲ್ಲಿ ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್.ಎಂ.ಎಂ.ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *