ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗ ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರು ಬೇಲ್ ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಜೈಲಿನಿಂದಲೇ ಹಲವು ನಿರ್ಮಾಪಕರಿಗೆ ದರ್ಶನ್ ಕರೆ ಮಾಡಿ ಜಾಮೀನಿಗಾಗಿ ಒತ್ತಾಯಿಸುತ್ತಿದ್ದಾರೆ.
ಹೌದು, ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ದರ್ಶನ್ ಬೇಡಿಕೆ ಇಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾರಕ್ಕೆ ಮೂರು ಬಾರಿ ಕರೆ ಮಾಡುವ ಅವಕಾಶ ಇದೆ. ಆ ಮೂರು ಬಾರಿಗೂ ದರ್ಶನ್ ಅವರು ನಿರ್ಮಾಪಕರಿಗೆ ಕರೆ ಮಾಡಿದ್ದಾರೆ.ಅಲ್ಲದೇ ಅಕ್ಕ-ಪಕ್ಕದ ಖೈದಿಗಳ ಲಿಮಿಟ್ ಕೂಡ ಜಾಮೀನಿಗಾಗಿ ನಟ ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿ 11 ದಿನ ಆಗಿದೆ. ಇದೀಗ ಜೈಲಿನಲ್ಲಿ ಇರುವುದು ಕಷ್ಟವಾಗುತ್ತಿದೆ ಎಂದು ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಜೈಲಿನಿಂದಲೇ ಚಿತ್ರರಂಗದ ಆಪ್ತ ನಟ ಹಾಗೂ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗಾಗಿ ಪ್ರಭಾವಿ ನಾಯಕರಿಗೆ ದರ್ಶನ್ ಒತ್ತಾಯ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುವುದು ಕಷ್ಟವಾಗುತ್ತಿದೆ. ಹೀಗಾಗಿ ನಟ ದರ್ಶನ್ ಜೈಲಿನಿಂದಲೇ ಹಗಲು-ರಾತ್ರಿ ಕರೆ ಮಾಡಿ ಜಾಮೀನಿಗೆ ವ್ಯವಸ್ಥೆ ಮಾಡುವಂತೆ ಹಲವು ಪ್ರಭಾವಿ ನಾಯಕರಿಗೆ ಕೋರುತ್ತಿದ್ದಾರೆ. ಇನ್ನೂ ಜೈಲಿನಲ್ಲಿ ವಾರಕ್ಕೆ ಮೂರು ಬಾರಿ ಫೋನ್ ಮಾಡಲು ಜೈಲಿನ ಸಿಬ್ಬಂದಿ ಅವಕಾಶ ಕೊಟ್ಟಿದ್ದಾರೆ.
ಹೀಗಾಗಿ ದರ್ಶನ್ ಜೈಲಿನ ಫೋನ್ ಬೂತ್ನಿಂದ ದರ್ಶನ್ ಕರೆ ಮಾಡುತ್ತಿದ್ದಾರೆ. ಆದರೆ ಈವರೆಗೆ ಒಂದೇ ಒಂದು ಬಾರಿಯೂ ಅವರು ತಮ್ಮ ಕುಟುಂಬದವರಿಗೆ ಫೋನ್ ಮಾಡಿಲ್ಲ. ಬದಲಿಗೆ, ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಕರೆ ಮಾಡಿ ಜಾಮೀನಿಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ರಾತ್ರಿಯಾಗುತ್ತಿದ್ದಂತೆ ದರ್ಶನ್ ಫೋನ್ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ದರ್ಶನ್ ಅವರು ಅಕ್ಕ-ಪಕ್ಕದ ಖೈದಿಗಳಿಗೆ ಮೀಸಲಾಗಿದ್ದ ಫೋನ್ ಕರೆಗಳನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ಜಾಮೀನು ಪಡೆಯಬೇಕು ಎಂಬ ಹಂಬಲ ಅವರಲ್ಲಿ ಹೆಚ್ಚಾಗಿದೆ. ಹೇಗಾದರೂ ಮಾಡಿ ತಮ್ಮನ್ನು ಜೈಲಿನಿಂದ ಹೊರಗೆ ತರುವಂತೆ ದರ್ಶನ್ ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.