Sports: ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಜಯ: ಏಳನೇ ಬಾರಿ Trophy ಭಾರತದ ಮುಡಿಗೆ..!01-07-2023

Sports: ಶುಕ್ರವಾರ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್  ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದ ಭಾರತದ ಪುರುಷರ ಕಬಡ್ಡಿ ತಂಡವು ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ವಿರುದ್ಧ 42-32 ಅಂತರದಿಂದ ಗೆದ್ದಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ಕಬಡ್ಡಿ ತಂಡವಾದ ಭಾರತವು, ಕಾಂಟಿನೆಂಟಲ್ ಚಾಂಪಿಯನ್ಶಿಪ್ನಲ್ಲಿ ಈ ಮೂಲಕ ಎಂಟನೇ ಪ್ರಶಸ್ತಿ ಗೆದ್ದಿದೆ.

ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್

ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಜಯ

ಈ ಹಿಂದೆ ಒಟ್ಟು ಏಳು ಬಾರಿ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ, ತನ್ನ ಬಲಿಷ್ಠ ದಾಖಲೆಯನ್ನು ಮುಂದುವರೆಸಿದೆ. ಆಕ್ರಮಣಕಾರಿ ಆಟ ಪ್ರಾರಂಭಿಸಿದ ಇರಾನ್ಗೆ, ಮುನ್ನಡೆ ಪಡೆಯಲು ಭಾರತ ಅವಕಾಶ ನೀಡಲಿಲ್ಲ. ತಮ್ಮ ಅನುಭವ ಹಾಗೂ ಚಾಣಾಕ್ಷತನ ಪ್ರತದರ್ಶಿಸಿದ ನಾಯಕ ಪವನ್ ಸೆಹ್ರಾವತ್, ಎರಡು ಟಚ್ ಪಾಯಿಂಟ್ಗಳೊಂದಿಗೆ ಮೊದಲ ಆಲ್-ಔಟ್ ಮಾಡಿದರು. ಅಲ್ಲದೆ ತಂಡಕ್ಕೆ 10-4ರ ಆರಂಭಿಕ ಮುನ್ನಡೆ ತಂದುಕೊಟ್ಟರು. ಇರಾನಿಯನ್ನರ ಮೇಲೆ ಒತ್ತಡ ಹೆಚ್ಚಿಸಿದ ಭಾರತ ಮತ್ತೊಮ್ಮೆ ಆಲ್-ಔಟ್ ಮಾಡಿತು. ವಿರಾಮದ ವೇಳೆಗೆ ಭಾರತ 23-11ರಿಂದ ಮುಂದಿತ್ತು.

https://pragatitv.in/asian-youth-boxing-gold-to-bishwamitra-chongtham/

ಇರಾನ್ನ ಆಲ್ರೌಂಡರ್ ಮೊಹಮ್ಮದ್ರೇಜಾ ಚಿಯಾನೆಹ್ ಅವರು ತಮ್ಮ ತಂಡವನ್ನು ಪುನರಾಗಮನ ಮಾಡಲು ಪ್ರಯತ್ನಿಸಿದರು. ಆದರೆ, ಅವರ ಪ್ರಯತನ ಕೈ ಹಿಡಿಯಲಿಲ್ಲ. ಮತ್ತೊಂದು ಬಾರಿ ಆಲ್-ಔಟ್ ಆದ ತಂಡವು 14-33ರ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ಭರ್ಜರಿ ಅಂತರದೊಂದಿಗೆ ಜಯ ಸಾಧಿಸಿತು.”ಇರಾನ್ ವಿರುದ್ಧದ ಫೈನಲ್ ಪಂದ್ಯದಲ್ಲಿ 42-32 ಅಂಕಗಳೊಂದಿಗೆ, ಟೀಮ್ ಇಂಡಿಯಾ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಸಂಪೂರ್ಣ ತಂಡಕ್ಕೆ ಅಭಿನಂದನೆಗಳು,” ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.

Facebook: https://www.facebook.com/PragathiTV/

Pragati TV Social Connect for more latest u

Pragati TV Social Connect for more latest u

Leave a Reply

Your email address will not be published. Required fields are marked *