ಸಿದ್ದಗಂಗಾ ಮಠದಲ್ಲಿ ಅರ್ಥಪೂರ್ಣ ಆಚರಣೆ – ಶಿವಕುಮಾರ ಶ್ರೀಗಳ ಸ್ಮರಣೆಯಲ್ಲಿ ವಿಶೇಷ ಕಾರ್ಯಕ್ರಮ
ತುಮಕೂರು :– ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ 119 ಜನ್ಮ ದಿನೋತ್ಸವದ ಅಂಗವಾಗಿ ಶ್ರೀ ಸಿದ್ದಗಂಗಾ ಮಠದಲ್ಲಿ, 119 ಮಕ್ಕಳಿಗೆ ಹೆಸರನ್ನು ಇಡುವ ನಾಮಕರಣ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಶಿವಕುಮಾರ ಮಹಾಸ್ವಾಮೀಜಿ ದಾಸೋಹ ಟ್ರಸ್ಟ್ ವತಿಯಿಂದ ಕಳೆದ 8 ವರ್ಷದಿಂದ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ, ಮಕ್ಕಳಿಗೆ ಹೆಸರನ್ನು ಇಡುವ ಮೂಲಕ ಅರ್ಥಪೂರ್ಣವಾಗಿ ಶ್ರೀಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅಂತೆಯೇ ಈ ವರ್ಷವೂ ಅವರ ಜನ್ಮದಿನೋತ್ಸವ ಏ.1ಕ್ಕೆ ಮಾತ್ರ ಸೀಮಿತವಾಗದೇ ಭಾನುವಾರ ನಾಮಕರಣ ಮಹೋತ್ಸವವೂ ಜರುಗಿತು. 119 ಮಕ್ಕಳಿಗೆ ನಾಮಕಾರಣ ಶಾಸ್ತ್ರವನ್ನು ಅರ್ಥಪೂರ್ಣವಾಗಿ ಮಾಡಲಾಯಿತು. ನಾಮಕರಣ ಶಾಸ್ತ್ರದಲ್ಲಿ ಗಂಡು ಮಕ್ಕಳಿಗೆ ಶಿವಕುಮಾರ ಸ್ವಾಮಿ ಎಂದು ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ಹೆಸರಿಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ನಾಮಕರಣ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರಸ್ವಾಮೀಜಿ ಮಕ್ಕಳಿಗೆ ಹೆಸರನ್ನು ಇಡಲಾಯಿತು. ಈ ಕಾರ್ಯಮ್ರವು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಬೇಕಾಗಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಮಕರಣದೊಂದಿಗೆ ಟ್ರಸ್ಟ್ ವತಿಯಿಂದ 119 ಮಕ್ಕಳಿಗೆ ತೊಟ್ಟಿಲು, ಹಾಸಿಗೆ ಹಾಗೂ ಸೊಳ್ಳೆಪರದೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಾಮಕರಣ
ಏಪ್ರಿಲ್ 1ರಂದು ಸಿದ್ದಗಂಗಾ ಶ್ರೀಗಳ ಜನ್ಮದಿನದಂದೇ ನಾಮಕರಣ ಮಹೋತ್ಸವನ್ನು ಆಯೋಜಿಸಲಾಗಿದ್ದರೂ, ರಾಷ್ಟ್ರಪತಿಗಳ ಕಾರ್ಯಕ್ರಮದ ಭದ್ರತಾ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಾಮಕರಣ ಮಹೋತ್ಸವ ನೆರವೇರಿದ್ದು, ಸಿದ್ದಗಂಗಾ ಮಠದ ಸೇವಾ ಪರಂಪರೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು
For More Updates Join our WhatsApp Group :




