ಸನಾತನ ಧರ್ಮ ಕುರಿತು ಸ್ಟಾಲಿನ್ ವಿವಾದಿತ ಹೇಳಿಕೆ : ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ʼಸನಾತನ ಧರ್ಮ ನಿರ್ಮೂಲನೆ ಅಗತ್ಯʼ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರ್ಯಕ್ರಮದ ಆಯೋಜಕರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ತಮಿಳುನಾಡಿನ ಸಂಘಟಕರಾದ ವೆಂಕಟೇಶನ್‌, ಎಂ ರಾಮಲಿಂಗಂ ಮತ್ತು ಆಧವನ್‌ ಧೀತ್ಚನ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ನಡೆಸಿದರು.

ವರದಿಯಾಗಿರುವ ವಿವಾದಾತ್ಮಕ ಭಾಷಣದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪೀಠವು ಎಲ್ಲಾ ಧರ್ಮಗಳನ್ನು ಗೌರವಿಸುವುದು ಅಗತ್ಯ ಎಂದು ಒತ್ತಿ ಹೇಳಿದರು. ಹೇಳಿಕೆ ನೋಡಿ, ಅಲ್ಲಿಯ ಆರೋಪಗಳನ್ನು ನೋಡಿ. ಕೆಲವು ಸಿದ್ಧಾಂತ, ಧರ್ಮ, ಧರ್ಮಗ್ರಂಥಗಳನ್ನು ನಾವು ಒಪ್ಪದಿರುವುದು ಒಂದು ಕಡೆಯಾದರೆ ಅದನ್ನು ತುಚ್ಛವಾಗಿ ಕಾಣಯವುದು ಇನ್ನೊಂದು ವಿಚಾರವಾಗಿದೆ ಎಂದು ನ್ಯಾ. ದೀಕ್ಷಿತ್‌ ಮೌಖಿಕವಾಗಿ ಹೇಳಿದರು.

ತಮಿಳುನಾಡು ಪ್ರಗತಿಪರ ಬರಹಗಾರರು, ಕಲಾವಿದರ ಸಂಘಟನೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟ್ಯಾಲಿನ್‌ ಅವರು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್‌ ನಿರ್ಮೂನೆ ಮಾಡಿದ ಹಾಗೆ ಸನಾತನ ಧರ್ಮವನ್ನೂ ನಾವು ತೊಲಗಿಸಬೇಕು ಎಂದಿದ್ದರು.

ಇದಕ್ಕೆ ಪೀಠವು ಜನರು ತಾವು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂಥ ಮಾನಹಾನಿ ಹೇಳಿಕೆ ನೀಡಬಾರದು. ಅವರು ಸಾರ್ವಜನಿಕ ವ್ಯಕ್ತಿಗಳಾದ ಅಂಥ ಹೇಳಿಕೆಯನ್ನೇ ನೀಡಬಾರದು” ಎಂದರು.

Leave a Reply

Your email address will not be published. Required fields are marked *