ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 23 ಮಂದಿಗೆ ಗಾಯ
ಜಪಾನ್ : ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ನೆಲಸಮಗೊಂಡಿವೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ. ಹಲವು ವಿಡಿಯೋಗಳು ವೈರಲ್ ಆಗಿವೆ.ಹಚಿನೋಹೆಯ ಹೋಟೆಲ್ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.
ಇವಾಟೆ ಪ್ರಿಫೆಕ್ಚರ್ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.ಮುನ್ನೆಚ್ಚರಿಕೆಯಾಗಿ ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
For More Updates Join our WhatsApp Group :




